ಬಿಜೆಪಿ ಮತ್ತು ನಮ್ಮ ಹಿಂದೂತ್ವದ ನಡುವೆ ಬಹಳಷ್ಟು ವ್ಯತ್ಯಾಸವಿದೆ. ತಮ್ಮ ಹಿಂದೂತ್ವ ಜನರ ಮನೆಗಳಲ್ಲಿ ಒಲೆಗಳನ್ನು ಹೊತ್ತಿಸಿದರೆ, ಬಿಜೆಪಿಯ ಹಿಂದೂತ್ವ ಮನೆಗಳನ್ನು ಹೊತ್ತಿಸುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ , ಪ್ರ...
ನನ್ನನ್ನು ಬಂಧಿಸುವ ಮೂಲಕ ಅವರು ಯಾರನ್ನು ಬೇಕಾದರೂ ಬಂಧಿಸಬಲ್ಲರೆಂಬ ಸಂದೇಶ ನೀಡಿದ್ದಾರೆ. ಈ ಮಿಷನ್ ಹೆಸರು “ಒಂದು ದೇಶ ಒಂದು ನಾಯಕ” ಹೀಗೆಂದು ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ವಿಪಕ್ಷ ಆಡಳಿತದ ಎಲ್ಲಾ ಮುಖ್ಯಮಂತ್ರಿಗಳನ್ನು ಜೈಲಿಗೆ ತಳ್ಳಿ ಸರಕಾರವನ್ನು ಬುಡಮೇಲು ಮಾಡುವುದು ಇವರ ಉದ್ದೇಶ ಎಂದು ಆರೋಪಿಸಿದ್ದಾರೆ. ...
ಕೇಂದ್ರವು ಸೂಚಿಸಿದಾಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. 2019 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದ ಸಿಎಎ, 2014 ರ ಡಿಸೆಂಬರ್ 31 ಕ್ಕಿಂತ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ...
ಒಂದೇ ಕುಟುಂಬದ ಆರು ಸದಸ್ಯರ ಸಾವಿನ ಸುದ್ದಿ ಹರಡಿದ ನಂತರ ಉತ್ತರ ಪ್ರದೇಶದ ಸೀತಾಪುರದಲ್ಲಿ ಆತಂಕ ಸೃಷ್ಟಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ. ಪಾಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ವರದಿಯ ಪ್ರಕಾರ, ಮಾನಸಿಕ ಅಸ್ವಸ್ಥನೆಂದು ನಂ...
ಆಗ್ನೇಯ ದೆಹಲಿಯ ಜಂಗ್ಪುರ ಪ್ರದೇಶದ ಮನೆಯಲ್ಲಿ 63 ವರ್ಷದ ವೈದ್ಯರನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಡಾ.ಯೋಗೇಶ್ ಚಂದರ್ ಪಾಲ್ ಎಂದು ಗುರುತಿಸಲಾಗಿದ್ದು, ಅವರು ಜಂಗ್ಪುರ ಪ್ರದೇಶದಲ್ಲಿ ಖಾಸಗಿ ಕ್ಲಿನಿಕ್ ಹೊಂದಿದ್ದರು. ದೆಹಲಿಯ ಜಂಗ್ಪುರದಲ್ಲಿರೋ ಫ್ಲ್ಯಾಟ್ ನ ಮೇಲಿನ ನೆಲಮಹಡಿಯಲ್ಲಿ ಕೊಲೆ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 50 ದಿನಗಳ ಬಂಧನದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಝೀ ಜ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ ದಿಲ್ಲಿ ಸಿಎಂ ಕೇಜ್ರಿವಾಲ್, ಸಾರ್ವಜನಿಕರಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು ಮತ್ತು "ಸಾರ್ವಜನಿಕರು ನ್ಯಾಯವನ್ನು ತಲುಪಿಸುತ್ತಾರೆ" ಎಂದು ಹೇಳಿದರು. ದೆಹಲಿಯ ಅಬಕ...
ನಕ್ಸಲರು ಒಗ್ಗೂಡಿ ಆಡಳಿತದೊಂದಿಗೆ ಮಾತುಕತೆ ನಡೆಸಿ ಉತ್ತರಗಳನ್ನು ಕಂಡುಕೊಳ್ಳಬೇಕೆಂದು ಛತ್ತೀಸ್ ಗಢದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಒತ್ತಾಯಿಸಿದ್ದಾರೆ. ಬಿಜಾಪುರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹನ್ನೆರಡು ನಕ್ಸಲರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ ಅವರು ಈ ರೀತಿ ಮನವಿ ಮಾಡಿದ್ದಾರೆ. ಮುಖ್ಯವಾಹಿನಿಗೆ ಸೇರಲು ಮತ್ತು ನಮ್ಮ ಸರ್ಕ...
ಸಿಬ್ಬಂದಿಗಳ ಅಸಹಕಾರವು ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಸಂಕಷ್ಟಕ್ಕೆ ದೂಡಿದೆ.. ಸೌದಿ ಅರೇಬಿಯಾದಿಂದ ಭಾರತಕ್ಕೆ ನಿಗದಿಪಡಿಸಲಾಗಿರುವ ಹಲವಾರು ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ. ಮೇ 12 ರ ವರೆಗಿರುವ ಎಲ್ಲಾ ಸರ್ವಿಸ್ ಗಳನ್ನು ರದ್ದು ಪಡಿಸಿರುವುದಾಗಿ ತಿಳಿಸಲಾಗಿದೆ. ರಿಯಾದ್, ಜಿದ್ದಾ ಸೆಕ್ಟರ್ ಗಳಿಂದ ಕೊಯ್ಕೋಡ್ ಕಣ್ಣೂರು ವಿಮಾ...
ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದಂತೆಯೇ ರಫಾದಿಂದ ರೂ.1,10,000 ಸಾವಿರಕ್ಕಿಂತಲೂ ಅಧಿಕ ಮಂದಿ ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಗಾಝಾದ ಯಾವ ಜಾಗವೂ ಸುರಕ್ಷಿತವಲ್ಲ. ಇಡೀ ಗಾಝಾದಲ್ಲಿ ಅಪಾಯ ಭೀತಿ ಆವರಿಸಿದೆ. ಕದನ ವಿರಾಮದ ಹೊರತು ಬೇರೆ ದಾರಿಯೇ ಇಲ್ಲ ಎಂದು ವಿಶ್ವ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರ...
ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ವಿಧಿಸಿದ್ದ ಮೇ ೧೦ರ ಗಡುವಿಗೂ ಮುಂಚಿತವಾಗಿಯೇ ಭಾರತವು ತನ್ನೆಲ್ಲ ಸೇನಾ ತುಕಡಿಗಳನ್ನು ತೆರವುಗೊಳಿಸಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯ ವಕ್ತಾರ ತಿಳಿಸಿದ್ದಾರೆ. ದ್ವೀಪ ರಾಷ್ಟ್ರಕ್ಕೆ ಭಾರತ ನೀಡಿದ್ದ ಎರಡು ಹೆಲಿಕಾಪ್ಟರ್ ಹಾಗೂ ಡಾರ್ನಿಯರ್ ವಿಮಾನ ನಿರ್ವಹಿಸಲು ಭಾರತೀಯ ಸೇನಾ ತುಕಡಿ ಮಾಲ್ದೀ...