2:51 AM Wednesday 15 - October 2025

ಪ.ಬಂಗಾಳದಲ್ಲಿ ಭೋಜನ ರಾಜಕೀಯ! | ರಿಕ್ಷಾ ಎಳೆಯುವವರ ಮನೆಯಲ್ಲಿ ಊಟ ಮಾಡಿದ ಅಮಿತ್ ಶಾ

amith shah
07/04/2021

ಡೊಮ್ಜೂರ್: ಪಶ್ಚಿಮ ಬಂಗಾಳದಲ್ಲಿ  ನಾಲ್ಕನೇ ಹಂತದ ಮತದಾನ ಏಪ್ರಿಲ್ 10ರಂದು ನಡೆಯಲಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿದ  ಅಮಿತ್ ಶಾ ಅವರು, ದೋಜ್ ಪುರ ರಿಕ್ಷಾ ಎಳೆಯುವ ವೃತ್ತಿ ಮಾಡುತ್ತಿರುವವರ ಮನೆಯಲ್ಲಿ ಊಟ ಮಾಡುವ ಮೂಲಕ ಮತದಾರರನ್ನು ಸೆಳೆದರು.

ಪಶ್ಚಿಮ ಬಂಗಾಳ ಚುನಾವಣೆ ಆರಂಭವಾದ ಬಳಿಕ ಅಮಿತ್ ಶಾ ಹಲವಾರು ಕಡೆಗಳಲ್ಲಿ ಭೋಜನ ಮಾಡುವ ಮೂಲಕ ಮತದಾರರನ್ನು ಸೆಳೆದಿದ್ದಾರೆ. ಇದೀಗ ಪಶ್ಚಿಮ ಬಂಗಾಳದಲ್ಲಿ ದೋಜ್ ಪುರದ ಬಿಜೆಪಿ ಅಭ್ಯರ್ಥಿ ರಾಜೀವ್ ಬ್ಯಾನರ್ಜಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version