ಬಾಲ್ಕನಿಯಲ್ಲಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿದ ಯುವತಿಯರಿಗೆ ಈಗ ಸಂಕಷ್ಟ!

dubai
07/04/2021

ದುಬೈ: ಕಟ್ಟಡದ ಬಾಲ್ಕನಿಯಲ್ಲಿ ನಗ್ನ ಫೋಟೋ ಶೂಟ್ ಮಾಡಿರುವ ಡಜನ್ ಯುವತಿಯರ ಮೇಲೆ ದುಬೈ ಸರ್ಕಾರ ಕಠಿಣ ಕ್ರಮಕೈಗೊಂಡಿದ್ದು, ಬಂಧಿತ ಎಲ್ಲರನ್ನುಗಡೀಪಾರು ಮಾಡಿದೆ ಎಂದು ದುಬೈ ಅಟಾರ್ನಿ ಜನರಲ್ ಇಸಾಮ್ ಇಸಾ ಅಲ್ ಹುಮೈದಾನ್ ಹೇಳಿದ್ದಾರೆ.

ದುಬೈ ಮರೀನಾ ಪ್ರದೇಶದ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಯುವತಿಯರು ಸಂಪೂರ್ಣವಾಗಿ ನಗ್ನವಾಗಿ ನಿಂತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಈ ಘಟನೆ ಯುಎಇ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಗ್ನ ಫೋಟೋಶೂಟ್ ಇಸ್ರೇಲಿ ವೆಬ್‌ ಸೈಟ್‌ನ ಜಾಹೀರಾತು ಚಿತ್ರೀಕರಣದ ಭಾಗವಾಗಿದೆ ಎಂದು ಹೇಳಲಾಗಿದೆ. 15 ಮಾದರಿಯಲ್ಲಿ ಫೋಟೋಶೂಟ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಯುವತಿಯರು ಸಂಪೂರ್ಣವಾಗಿ ಬೆತ್ತಲೆಯಾಗಿ ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸುವುದು ದುಬೈನ ಕಾನೂನಿಗೆ ವಿರುದ್ಧವಾಗಿರುವುದರಿಂದ ಯುವತಿಯರ ವಿರುದ್ಧ ಮೊಕದ್ದಮೆ ಹೂಡಲಾಯಿತು.

ಯುನೈಟೆಡ್ ಅರಬ್ ಎಮಿರೇಟ್ಸ್ ಕಾನೂನಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ನಗ್ನತೆಯನ್ನು ಪ್ರದರ್ಶಿಸುವುದು ಮತ್ತು ಇತರ ಅಶ್ಲೀಲ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 5,000 ದಿರ್ಹಾಮ್‌ ಗಳವರೆಗೆ ದಂಡ ವಿಧಿಸಲಾಗುತ್ತದೆ. ಅಶ್ಲೀಲ ವಿಡಿಯೋಗಳನ್ನು ಹಂಚಿಕೊಂಡರೆ 5 ಲಕ್ಷಗಳ ವರೆಗೆ ದಂಡ ವಿಧಿಸುವ ಕಾನೂನು ಸಹ ಇದೆ.

ಇತ್ತೀಚಿನ ಸುದ್ದಿ

Exit mobile version