ಫುಟ್ ಪಾತ್ ಗೆ ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು, ಇಬ್ಬರಿಗೆ ಗಂಭೀರ ಗಾಯ

15/09/2023
ಮಂಗಳೂರು: ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಂಗಳೂರು ನಗರದ ಪಡೀಲ್ ಅಂಡರ್ ಪಾಸ್ನಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಭವಿನ್ ರಾಜ್ (20) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಕಲಿಯುತ್ತಿದ್ದ ಭವಿನ್ ರಾಜ್ ತನ್ನ ಗೆಳೆಯರ ಜತೆ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಪಡೀಲ್ ಅಂಡರ್ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್ಪಾಸ್ ಫುಟ್ ಪಾತ್ ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದಾರೆ. ಆದ್ರೆ ಈ ಪೈಕಿ ಭವಿನ್ ರಾಜ್ ಮೃತಪಟ್ಟಿದ್ದಾರೆ.