11:13 AM Saturday 31 - January 2026

ಡ್ಯೂಟಿ ಬಿಟ್ಟು ಬ್ಯೂಟಿಯ ಹಿಂದೆ ಸುತ್ತಿದ್ದ ಇನ್ಸ್ ಪೆಕ್ಟರ್ ಜೀವನ ದುರಂತ ಅಂತ್ಯ!

19/01/2021

ವಿಜಯವಾಡ: ಬ್ಯೂಟಿಷಿಯನ್ ಹಿಂದೆ ಬಿದ್ದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ಜೀವನ ದುರಂತ ಅಂತ್ಯವಾಗಿದ್ದು,  ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ  ಎಸ್‌ ಐ ವಿಜಯ್ ಕುಮಾರ್ ವಿವಾಹದ ಬಳಿಕವೂ ತಮ್ಮ ಹಳೆಯ ಪ್ರೇಯಸಿಯ ಜೊತೆಗೆ ಇದ್ದರು. ಆದರೆ ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಠಾಣೆಯಲ್ಲಿ ಎಸ್‌ ಐ ಆಗಿದ್ದ ವಿಜಯ್ ಕುಮಾರ್ ಅವರಿಗೆ ವಿವಾಹಕ್ಕಿಂತಲೂ ಮೊದಲು ಇಲ್ಲಿನ ಬ್ಯೂಟಿಷಿಯನ್ ಜೊತೆಗೆ ಪ್ರೇಮ ಸಂಬಂಧವಿತ್ತು.  ಈ ಕಾರಣಕ್ಕಾಗಿ ಒಂದು ಬಾರಿ ಅವರನ್ನು ಅಮಾನತು ಕೂಡ ಮಾಡಲಾಗಿತ್ತು.

ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ವಿಜಯ್ ಕುಮಾರ್, ಬ್ಯೂಟಿಷಿಯನ್ ಜೊತೆಗಿನ ಸಂಬಂಧ ಮುಂದುವರಿಸಿದ್ದರು.  ಮದುವೆಯ ಬಳಿಕ ಪತ್ನಿಯನ್ನು ಜೊತೆಗೆ ಇಟ್ಟುಕೊಳ್ಳದೇ ಬ್ಯೂಟಿಷಿಯನ್ ಜೊತೆಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ವಿಜಯ್ ವಾಸಿಸುತ್ತಿದ್ದರು. ಇದೀಗ ತಾನು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿಯೇ ವಿಜಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನೂ ವಿಜಯ್ ಅವರ ಆತ್ಮಹತ್ಯೆಗೆ ಬ್ಯೂಟಿಷಿಯನ್ ನ ಒತ್ತಡವೇ ಕಾರಣ ಎಂದು ವಿಜಯ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version