ಅಮೆರಿಕದ ಜೋ ಬೈಡನ್ ಆಡಳಿತದ ಬಲವಾದ ಒತ್ತಡದ ನಂತರ ಇಸ್ರೇಲ್ ದಕ್ಷಿಣ ಗಾಝಾ ಪಟ್ಟಿಗೆ ನೀರು ಸರಬರಾಜನ್ನು ಪುನರ್ ಆರಂಭಿಸಿದೆ ಎಂದು ಇಬ್ಬರು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಝಾಗೆ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸುವ ಇಸ್ರೇಲ್ ನ ನಿರ್ಧಾರವು ಗಾಝಾದಲ್ಲಿ ಈಗಾಗಲೇ ಭೀಕರ ಮಾನವೀಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಯು...
ಇಸ್ರೇಲ್ ಪಡೆಗಳು ಗಾಝಾದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಇದು ಮಧ್ಯಪ್ರಾಚ್ಯದಲ್ಲಿ ಬೇರೆಡೆ ಸಂಘರ್ಷಗಳನ್ನು ಹೆಚ್ಚಿಸಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ನಿಶಸ್ತ್ರ ನಾಗರಿಕರು ಮತ್ತು ಗಾಝಾದ ಜನರ ವಿರುದ್ಧ ಇಸ್ರೇಲ್ನ ದಾಳಿಗಳು ಮುಂದುವರಿದರೆ, ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರಿಂದಲೂ ತಡೆಯಲು ...
ಇಸ್ರೇಲ್-ಫೆಲೆಸ್ತೀನ್ ಯುದ್ದದಲ್ಲಿ ಜೀವಗಳ ಹರಣ ಆಗುತ್ತಿದೆ. ಗಾಝಾದಲ್ಲಿರುವ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಳ ಆಗುತ್ತುದ್ದು, ಈ ಮಧ್ಯೆ ಗಾಝಾದ ವೈದ್ಯರು ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಗಾಯಗೊಂಡ ಜನರಿಂದ ತುಂಬಿರುವ ಆಸ್ಪತ್ರೆಗಳಲ್ಲಿ ಇಂಧನ ಮತ್ತು ಮೂಲಭೂತ ಸಾಮಾಗ್ರಿಗಳ ತೀವ್ರ ಕೊರತೆ ಇರುವುದರಿಂದ ಸಾವಿರಾರು ಜನರು ಸಾಯಬಹ...
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯರು ತವರಿಗೆ ಮರಳುತ್ತಿದ್ದಾರೆ. ಭಾರತ ಸರ್ಕಾರ ಪ್ರಾರಂಭಿಸಿರುವ ಆಪರೇಷನ್ ಅಜಯ್ ಕಾರ್ಯಾಚರಣೆಯ ಮೂರನೇ ವಿಮಾನವು 197 ಪ್ರಯಾಣಿಕರನ್ನು ಕರೆತಂದಿದೆ. ಇದೇ ವೇಳೆ ನಾಲ್ಕನೇ ವಿಮಾನ ಕಾರ್ಯಾಚರಣೆಗೆ ಸಿದ್ದವಾಗಿದೆ. ಕೇಂದ್ರ ಸಚಿವ ಕುಶಾಲ್ ಕಿಶೋರ್ ಇಸ...
ಇಸ್ರೇಲ್-ಫೆಲೆಸ್ತೀನ್ ಯುದ್ದದ ಕುರಿತು ವಿಶ್ವದಲ್ಲಿ ಪರ-ವಿರೋಧ ಪ್ರತಿಭಟನೆಗಳು, ಚರ್ಚೆಗಳು ಆರಂಭವಾಗಿವೆ. ಅಮೇರಿಕಾ, ಫ್ರಾನ್ಸ್ ಸೇರಿದಂತೆ ಕೆಲವು ರಾಷ್ಟ್ರಗಳು ಇಸ್ರೇಲ್ ಪರ ನಿಂತಿದ್ರೆ ಇನ್ನು ಕೆಲ ದೇಶಗಳು ಫೆಲೆಸ್ತೀನ್ ಪರ ನಿಂತಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಮುಖ ಆಕರ್ಷಣೆ ಕೇಂದ್ರವಾದ ಟೈಮ್ಸ್ ಸ್ಕ್ವೇರ್ನಲ್ಲಿ ಈ...
ಗಾಝಾ ಪಟ್ಟಿಯಲ್ಲಿ ದಾಳಿಗಳು ನಡೆಸುವ ಜೊತೆಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ಬಂಡುಕೋರರ ಮೇಲೆ ಹೆಚ್ಚಿನ ಬಲದಿಂದ ದಾಳಿ ನಡೆಸುವುದಾಗಿ ಪ್ರತಿಜ್ಞೆ ಮಾಡಿವೆ. ಕಳೆದ ವಾರಾಂತ್ಯದಲ್ಲಿ ಹಮಾಸ್ ಸೈನಿಕರು ತನ್ನ ಭೂಪ್ರದೇಶದ ಮೇಲೆ ನಡೆಸಿದ ದೊಡ್ಡ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪಡೆಗಳು ನೆಲದ ದಾಳಿಗೆ ತಯಾರಿ ನಡೆಸುತ್ತಿವೆ. ಉತ್ತರ ಗಾಝ...
ದುಬೈನಿಂದ ಅಮೃತಸರಕ್ಕೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ತುರ್ತು ವೈದ್ಯಕೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಅನಾರೋಗ್ಯಪೀಡಿತ ಪ್ರಯಾಣಿಕರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ಪ್...
ವಾಷಿಂಗ್ಟನ್: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಅಮೆರಿಕದ ಮೇರಿ ಲ್ಯಾಂಡ್ ಉಪನಗರದಲ್ಲಿ ಇಂದು ಉದ್ಘಾಟಿಸಲಾಯಿತು. ಈ ಪ್ರತಿಮೆಯು ವಿದೇಶದಲ್ಲಿ ಅನಾವರಣಗೊಳಿಸಿರುವ ಅಂಬೇಡ್ಕರ್ ಅವರ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಅಮೆರಿಕದ ವಿವಿಧ ಭಾಗದಿಂದ ಬಂದಿದ್ದ ಸುಮಾರು...
ನೆಲ, ವಾಯು ಮತ್ತು ಸಮುದ್ರದ ಮೂಲಕ ಗಾಝಾ ಮೇಲೆ 'ಸಂಘಟಿತ' ದಾಳಿ ನಡೆಸಲು ಸಿದ್ಧ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ. ಗಾಝಾ ಗಡಿಯುದ್ದಕ್ಕೂ ಸೇನೆಯು ತನ್ನ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಒಟ್ಟುಗೂಡಿಸಿದೆ ಮತ್ತು ಅಂತಿಮ ಕಮಾಂಡ್ ಗಾಗಿ ಕಾಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ನಮ್ಮ ಯುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲ...
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಏಳನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗಾಝಾ ಪಟ್ಟಿಯಲ್ಲಿ ವಾಯು, ನೆಲ ಮತ್ತು ನೌಕಾ ಪಡೆಗಳನ್ನು ಒಳಗೊಂಡ "ಸಂಘಟಿತ" ದಾಳಿಗೆ ಸಿದ್ಧವಾಗಿದೆ ಎಂದು ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಝಾ ಗಡಿಯ ಬಳಿ ಸೈನಿಕರನ್ನು ಭೇಟಿಯಾದ ನಂತರ ಸೇನೆಯು ಈ ಹೇಳಿಕೆ ನೀಡ...