ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಉಕ್ರೇನ್ ಸಂಘರ್ಷವನ್ನು ಶೀಘ್ರವಾಗಿ ಪರಿಹರಿಸಲು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನರ್ ಸ್ಥಾಪಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಮೂರು ದಿನಗಳ ಅಮೆರಿಕ ಭೇಟಿಯ ಅಂತಿಮ ಹಂತಕ್ಕಾಗಿ ಸದ್ಯ ನ್ಯೂ...
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿ ಅವರನ್ನು 'ರಾಷ್ಟ್ರದೂತ'ರು ಅಥವಾ ಭಾರತದ ಬ್ರಾಂಡ್ ರಾಯಭಾರಿಗಳು ಎಂದು ಕರೆದಿದ್ದಾರೆ. ತಮ್ಮ ಮೂರು ದಿನಗಳ ಪ್ರವಾಸದ ಭಾಗವಾಗಿ ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ನಲ್ಲಿರುವ ನಸ್ಸೌ ಕೊಲಿಸಿಯಂನಲ್ಲಿ ನಡೆದ 'ಮೋದಿ ಮತ್ತು ಯುಎಸ್' ಕ...
ಲೆಬನಾನ್ ನ ಹಿಜ್ಬುಲ್ಲಾ ಭಾನುವಾರ ಮುಂಜಾನೆ ಇಸ್ರೇಲ್ನೊಳಗಿನ ಮಿಲಿಟರಿ ನೆಲೆಯ ಮೇಲೆ ಕ್ಷಿಪಣಿಗಳ ಸುರಿಮಳೆಯನ್ನು ಹಾರಿಸಿದೆ. ಒಂದು ದಿನದ ಹಿಂದೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಗುಂಪಿನ ಹಿರಿಯ ನಾಯಕರೊಬ್ಬರು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ. ಯಾವುದೇ ರಾಕೆಟ್ ಗಳು...
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಯುಎಸ್ ಭೇಟಿಗೆ ತೆರಳಿದ್ದಾರೆ. ಅಲ್ಲಿ ಅವರು ಸೆಪ್ಟೆಂಬರ್ 21 ರಂದು ನಾಲ್ಕನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕ್ವಾಡ್ ಶೃಂಗಸಭೆಯನ್ನು ಅಧ್ಯಕ್ಷ ಜ...
ಶ್ರೀಲಂಕಾವು ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಹಾದಿಯನ್ನು ನಿರ್ಧರಿಸುವ ಅಧ್ಯಕ್ಷೀಯ ಚುನಾವಣೆಗಾಗಿ ಶನಿವಾರ ಮತದಾನವನ್ನು ಪ್ರಾರಂಭಿಸಿತು. 38 ಅಭ್ಯರ್ಥಿಗಳು ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಹಾಲಿ ಉದಾರವಾದಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರ್ಕ್ಸ್ ವಾದಿ ಒಲವು ಹೊಂದಿರುವ ಶಾಸಕ ಅನುರಾ ಕುಮಾರ ದಿಸ್ಸಾನಾಯಕೆ ಮತ...
ಪಶ್ಚಿಮ ಜೆರುಸಲೇಮನ್ನು ಕೇಂದ್ರವಾಗಿಟ್ಟುಕೊಂಡು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣವಾಗುವವರೆಗೆ ಇಸ್ರೇಲ್ ನೊಂದಿಗೆ ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಏರ್ಪಡಿಸುವುದಿಲ್ಲ ಎಂದು ಸೌದಿ ಅರೇಬಿಯಾ ಖಡಕ್ಕಾಗಿ ಹೇಳಿದೆ. ಸೌದಿ ಶೂರ ಕೌನ್ಸಿಲ್ ನ ಒಂಬತ್ತನೇ ಸಮ್ಮೇಳನದಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಅಭಿಪ್ರಾಯ...
ಲೆಬನಾನಿನಲ್ಲಿ ದಿನಗಳ ಹಿಂದೆ ಪೇಜರುಗಳು ಸ್ಫೋಟಗೊಂಡಿದ್ದು ಇದರ ಹಿಂದೆ ಕೇರಳದ ವ್ಯಕ್ತಿ ಒಬ್ಬರ ಕಂಪನಿಯ ಪಾತ್ರ ಇದೆ ಎಂದು ಹೇಳಲಾಗಿದೆ. ಈ ಕುರಿತಂತೆ ಬಲ್ ಗೇರಿಯಾ ತನಿಖೆಗೆ ಆದೇಶಿಸಿದೆ. ಹಿಝ್ಬುಲ್ಲಾಗೆ ಪೇಜರುಗಳನ್ನು ನೀಡಿರುವುದರಲ್ಲಿ ಕೇರಳೀಯ ಮತ್ತು ನಾರ್ವೆ ಪೌರನಾದ ರಿನ್ಸ್ ಜೋಸ್ ನ ಕಂಪನಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸಲಾಗುತ್ತಿ...
ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ಪುನರ್ ಸ್ಥಾಪಿಸುವ ಬಗ್ಗೆ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಸಾಮಾನ್ಯ ಗುರಿಯನ್ನು ಹಂಚಿಕೊಳ್ಳುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ ನಂತರ ವಿವಾದ ಭುಗಿಲೆದ್ದಿದೆ. ಕ್ಯಾಪಿಟಲ್ ಟಾಕ್ನಲ್ಲಿ ಜಿಯೋ ನ್ಯೂಸ್ನ ಹ...
ಕಳೆದೆರಡು ದಿನಗಳಲ್ಲಿ ಲೆಬನಾನ್ ನಾದ್ಯಂತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಮತ್ತು ಪೇಜರ್ ಗಳು ಸ್ಫೋಟಗೊಂಡಿದ್ದರಿಂದ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಬೈರುತ್ ನಲ್ಲಿ ಸ್ಫೋಟಗೊಂಡು ಕನಿಷ್ಠ 20 ಜನರು...
ಲೆಬನಾನ್ನಲ್ಲಿ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಪೇಜರ್ ಗಳ ಸಿಂಕ್ರೊನೈಸ್ಡ್ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 2,800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಲೆಬನಾನ್ನಲ್ಲಿರುವ ಅದರ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ನ ರ...