ಉತ್ತರ ಲೆಬನಾನ್‌ಗೆ ತನ್ನ ವೈಮಾನಿಕ ದಾಳಿಯನ್ನು ವಿಸ್ತರಿಸಿದ ಇಸ್ರೇಲ್ - Mahanayaka
12:04 AM Friday 13 - December 2024

ಉತ್ತರ ಲೆಬನಾನ್‌ಗೆ ತನ್ನ ವೈಮಾನಿಕ ದಾಳಿಯನ್ನು ವಿಸ್ತರಿಸಿದ ಇಸ್ರೇಲ್

05/10/2024

ಇಸ್ರೇಲಿ ಸೈನ್ಯವು ಶನಿವಾರ ಉತ್ತರ ಲೆಬನಾನ್‌ಗೆ ತನ್ನ ವೈಮಾನಿಕ ದಾಳಿಯನ್ನು ವಿಸ್ತರಿಸಿದೆ. ಬೈರುತ್ ಮತ್ತು ದಕ್ಷಿಣದ ನಗರಗಳಲ್ಲಿ ಬಾಂಬ್ ದಾಳಿಗಳು ಮುಂದುವರೆದಿವೆ. ಶನಿವಾರ ಮುಂಜಾನೆ ಉತ್ತರ ನಗರವಾದ ಟ್ರಿಪೋಲಿಯಲ್ಲಿನ ದಾಳಿಯಲ್ಲಿ ಹಮಾಸ್ ಉನ್ನತ ನಾಯಕ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲಿ ಸೇನೆಯು ಮೂರು ಎಚ್ಚರಿಕೆಗಳನ್ನು ನೀಡಿದ್ದು, ಆ ಪ್ರದೇಶದ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಒತ್ತಾಯಿಸಿದೆ. ರಾತ್ರಿಯಲ್ಲಿ ಬೈರುತ್‌ನ ವಿಮಾನ ನಿಲ್ದಾಣದ ಬಳಿ ವಿಮಾನಗಳು ಆಗಮಿಸುತ್ತಿದ್ದಂತೆ ಸ್ಫೋಟಗಳು ಮತ್ತು ವೈಮಾನಿಕ ದಾಳಿಗಳು ಸಂಭವಿಸಿದವು.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಶುಕ್ರವಾರದ ಧರ್ಮೋಪದೇಶದಲ್ಲಿ “ಇಸ್ರೇಲ್ ಹೆಚ್ಚು ಕಾಲ ಉಳಿಯುವುದಿಲ್ಲ, ಇರಾನ್ ಹಿಂದೆ ಸರಿಯುವುದಿಲ್ಲ” ಎಂದು ಎಚ್ಚರಿಸಿದ ನಂತರ ಈ ದಾಳಿ ಆರಂಭಗೊಂಡಿದೆ.

ಇಸ್ರೇಲ್ ಡಿಫೆನ್ಸ್ ಫೋರ್ಸಸ್ ಮೂರು ವಾರಗಳಿಂದ ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸುತ್ತಿದೆ, ಹಲವಾರು ಜನರನ್ನು ಕೊಂದು 1.2 ಮಿಲಿಯನ್ ಲೆಬನಾನ್ನರನ್ನು ಅವರ ಮನೆಗಳಿಂದ ಹೊರಹೋಗುವಂತೆ ಮಾಡಿದೆ.

ಹಮಾಸ್‌ನ ಸಶಸ್ತ್ರ ವಿಭಾಗ, ಅಲ್-ಕಸ್ಸಾಮ್ ಬ್ರಿಗೇಡ್‌ಗಳ ನಾಯಕ ಸಯೀದ್ ಅತಲ್ಲಾ, ಉತ್ತರ ಲೆಬನಾನಿನ ನಗರವಾದ ಟ್ರಿಪೋಲಿಯಲ್ಲಿರುವ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಮೂರು ಕುಟುಂಬ ಸದಸ್ಯರೊಂದಿಗೆ ಕೊಲ್ಲಲ್ಪಟ್ಟರು ಎಂದು ಹಮಾಸ್ ಸಂಯೋಜಿತ ಮಾಧ್ಯಮಗಳು ತಿಳಿಸಿವೆ. ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ