ಜಿಯೋದಿಂದ 'ನ್ಯೂ ಇಯರ್ ವೆಲ್‌ ಕಮ್ ಪ್ಲಾನ್ -2025' ಬಿಡುಗಡೆ - Mahanayaka
7:16 PM Saturday 25 - January 2025

ಜಿಯೋದಿಂದ ‘ನ್ಯೂ ಇಯರ್ ವೆಲ್‌ ಕಮ್ ಪ್ಲಾನ್ –2025’ ಬಿಡುಗಡೆ

reliance jio
13/12/2024

Reliance Jio: New Year Welcome Plan –2025

ರಿಲಯನ್ಸ್ ಜಿಯೋ ಕಂಪನಿಯು  ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಗ್ರಾಹಕರಿಗೆ ‘ನ್ಯೂ ಇಯರ್ ವೆಲ್‌ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದೆ. ಈ ಯೋಜನೆಯ ಬೆಲೆ ₹ 2025 ನಿಗದಿಪಡಿಸಲಾಗಿದೆ. ದೀರ್ಘಾವಧಿಯ ಯೋಜನೆ ಇದಾಗಿದ್ದು, ಅನಿಯಮಿತ 5ಜಿ ಡೇಟಾ, ಉಚಿಯ ಎಸ್‌ಎಂ‌ಎಸ್ ಮತ್ತು 200 ದಿನಗಳ‌ ಅನಿಯಮಿತ 5ಜಿ ಡೇಟಾ,  ವಾಯ್ಸ್, ಎಸ್‌ ಎಂಎಸ್ ಜೊತೆಗೆ ₹2,150ರ ಮೌಲ್ಯದ ಕೂಪನ್ ಸಹ ಸಿಗಲಿದೆ.

ಯಾರಿಗೆಲ್ಲ ಲಭ್ಯ : ಈ ಯೋಜನೆಯು ಜಿಯೋದ ಹಾಲಿ ಮತ್ತು ಹೊಸ ಗ್ರಾಹಕರಿಗೂ ಲಭ್ಯ. 2024ರ  ಡಿಸೆಂಬರ್ 11ರಿಂದ 2025ರ ಜನವರಿ 11ರ ವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ‌. ಮೈ ಜಿಯೋ ಆ್ಯಪ್, ಜಿಯೋದ ಅಧಿಕೃತ ವೆಬ್‌ಸೈಟ್‌ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.

 ಯೋಜನೆ‌ಯ ವಿವರ ಹೀಗಿದೆ :

ಅನಿಯಮಿತ 5ಜಿ ಡೇಟಾ:

* 500 ಜಿಬಿಯಷ್ಟು 4 ಜಿ ಡೇಟಾ (ದಿನಕ್ಕೆ 2.5 ಜಿಬಿಯಷ್ಟು)

* ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಸೇವೆ

* ₹2,150ರ ಮೌಲ್ಯದ ಪಾರ್ಟ್ನರ್ ಕೂಪನ್

ಜಿಯೋದ ₹349ರ ಪ್ಲಾನ್‌ 200 ದಿನಗಳಿಗೆ ₹2,493ರಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ಹೊಸ ಪ್ಲಾನ್‌ನಲ್ಲಿ ₹468ರಷ್ಟು ಉಳಿತಾಯ ಆಗಲಿದೆ.

 ಪಾರ್ಟ್ನರ್ ಕೂಪನ್ :

* ಅಜಿಯೋ ಖರೀದಿಗೆ ₹2500 ಅಥವಾ ಹೆಚ್ಚಿನ ಮೊತ್ತದ ಖರೀದಿಸಿದರೆ ₹500ರ ವಿನಾಯಿತಿ ಸಿಗಲಿದೆ, ಲಿಂಕ್ ಬಳಸಿ ರಿಡೀಮ್ ಮಾಡಬಹುದು.

*  ಸ್ವಿಗ್ಗಿಯಲ್ಲಿ ₹499ರ ಮೇಲಿನ‌ ಖರೀದಿಗೆ ₹150 ವಿನಾಯಿತಿ.

* EaseMyTrip.com ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ  ₹150 ವಿನಾಯಿತಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ