ರಾಜ್ಯ ಕಾಂಗ್ರೆಸ್​ ನೂತನ ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿಯಿಂದ 35 ಮಂದಿಯ ಅಧಿಕೃತ ಪಟ್ಟಿ ಪ್ರಕಟ - Mahanayaka
4:31 PM Thursday 10 - September 2026

ರಾಜ್ಯ ಕಾಂಗ್ರೆಸ್​ ನೂತನ ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿಯಿಂದ 35 ಮಂದಿಯ ಅಧಿಕೃತ ಪಟ್ಟಿ ಪ್ರಕಟ

congress
10/09/2026

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಐಸಿಸಿ (AICC) ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದು, ಒಟ್ಟು 35 ಮಂದಿಯ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷವು ಹಮ್ಮಿಕೊಂಡಿದ್ದ ‘ಸಂಘಟನ್ ಸೃಜನ್’ ಅಭಿಯಾನದಡಿ ನಡೆಸಿದ ಸಮೀಕ್ಷಾ ವರದಿ ಮತ್ತು ಅಭಿಪ್ರಾಯ ಸಂಗ್ರಹದ ಆಧಾರದ ಮೇಲೆ ಈ ನೇಮಕಾತಿಗಳನ್ನು ಅಂತಿಮಗೊಳಿಸಲಾಗಿದೆ.

ಈ ಅಭಿಯಾನದಡಿ ಎಐಸಿಸಿ ವೀಕ್ಷಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಆಯಾ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಸ್ಥಳೀಯ ನಾಯಕತ್ವ ಮತ್ತು ಸಂಘಟನೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆಹಾಕಿದ್ದರು. ವೀಕ್ಷಕರ ಈ ವರದಿಯನ್ನು ಆಧರಿಸಿ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಇದೀಗ ಅಧಿಕೃತ ಪಟ್ಟಿ ಪ್ರಕಟಿಸಲಾಗಿದೆ.

ಬೆಂಗಳೂರು ನಗರಕ್ಕೆ ಐವರು, ಬೆಂಗಳೂರು ಗ್ರಾಮಾಂತರಕ್ಕೆ ಒಬ್ಬರು, ಹಾಗೆಯೇ ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಿಗೆ ತಲಾ ಇಬ್ಬರು (ನಗರ ಮತ್ತು ಗ್ರಾಮಾಂತರ) ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ನೂತನ ಜಿಲ್ಲಾಧ್ಯಕ್ಷರ ಪಟ್ಟಿ:

ಬಾಗಲಕೋಟೆ: ದಯಾನಂದ ಎಸ್.ಪಾಟೀಲ್

ಬೆಂಗಳೂರು ಉತ್ತರ: ಅಬ್ದುಲ್ ವಜೀದ್

ಬೆಂಗಳೂರು ದಕ್ಷಿಣ: ಒ.ಮಂಜುನಾಥ್

ಬೆಂಗಳೂರು ಪೂರ್ವ: ಡಿ.ಕೆ.ಮೋಹನ್ ಬಾಬು

ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ

ಬೆಂಗಳೂರು ಸೆಂಟ್ರಲ್: ಜೆ.ಶರವಣನ್

ಬೆಂಗಳೂರು ಗ್ರಾಮಾಂತರ: ಸಿ.ಪ್ರಸನ್ನ ಕುಮಾರ್

ಚಿಕ್ಕೋಡಿ: ಲಕ್ಷ್ಮಣರಾವ್ ಚಿಂಗಳೆ

ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್

ಬೆಳಗಾವಿ ಗ್ರಾಮಾಂತರ: ಬಸವರಾಜ ಶೆಗಾವಿ

ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್

ಬಳ್ಳಾರಿ ಗ್ರಾಮಾಂತರ: ಕೆ.ಮಲ್ಲಿಕಾರ್ಜುನ

ಬೀದರ್: ಅಬ್ದುಲ್ ಮನ್ನಾನ್ ಸೇಠ್

ಚಾಮರಾಜನಗರ: ಜೆ.ಯೋಗೇಶ್

ಚಿಕ್ಕಮಗಳೂರು: ಹೆಚ್.ಪಿ.ಮಂಜೇಗೌಡ

ದಕ್ಷಿಣ ಕನ್ನಡ: ಪದ್ಮರಾಜ್ ಆರ್.ಪೂಜಾರಿ

ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ

ಧಾರವಾಡ ಗ್ರಾಮಾಂತರ: ಚಂದ್ರಶೇಖರ ಜುಟ್ಟಲ್

ಗದಗ: ವಾಸಣ್ಣ ಕುರ್ಡಗಿ

ಕಲಬುರಗಿ: ಡಾ.ಕಿರಣ್ ಎ.ದೇಶಮುಖ್

ಹಾಸನ: ಶಶಿಧರ್ ಜಿ.ಬಿ.

ಹಾವೇರಿ: ಸಂಜೀಬ್ ಕುಮಾರ್ ನೀರಲಗಿ

ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ.ದಂಗನವರ

ಕೊಡಗು: ಧರ್ಮಜ ಉತ್ತಪ್ಪ

ಕೋಲಾರ: ಎನ್.ನಾರಾಯಣಸ್ವಾಮಿ

ಕೊಪ್ಪಳ: ಮಲ್ಲಿಕಾರ್ಜುನ ನಾಗಪ್ಪ

ಮಂಡ್ಯ: ಕುಮಾರ್ ಕೊಪ್ಪ

ಮೈಸೂರು ನಗರ: ಆರ್.ಮೂರ್ತಿ

ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ

ರಾಯಚೂರು: ಕೆ.ಶಾಂತಪ್ಪ

ರಾಮನಗರ: ಸಿ.ಎನ್.ವೆಂಕಟೇಶ್

ಶಿವಮೊಗ್ಗ: ಹೆಚ್.ಸಿ.ಯೋಗೇಶ್

ಉಡುಪಿ: ಕಿಶನ್ ಕುಮಾರ್ ಹೆಗ್ಡೆ

ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ

ಯಾದಗಿರಿ: ಬಸರೆಡ್ಡಿ ಎಂ.ಪಾಟೀಲ್


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti