ಮಂಗಳೂರು: ಸೆಪ್ಟೆಂಬರ್ 10ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ - Mahanayaka
2:25 PM Wednesday 9 - September 2026

ಮಂಗಳೂರು: ಸೆಪ್ಟೆಂಬರ್ 10ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

power cut
09/09/2026

ಮಂಗಳೂರು: ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಮತ್ತು ವಿದ್ಯುತ್ ವಾಹಕ ಸ್ಥಳಾಂತರ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 10ರಂದು ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕದ್ರಿ ಉಪಕೇಂದ್ರ ವ್ಯಾಪ್ತಿ (ಬೆಳಿಗ್ಗೆ 10 – ಸಂಜೆ 5):

ಜಾರ್ಜ್ ಮಾರ್ಟೀಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್ ಬಾಗ್, ಸಿಟಿ ಹಾಸ್ಪಿಟಲ್, ಕಾಮತ್ ನರ್ಸಿಂಗ್ ಹೋಂ, ಗಿರಿಯಾಸ್, ಆರ್ಯ ಸಮಾಜ ರಸ್ತೆ, ಭಾರತ್ ಬೀಡಿ, ಪ್ಲ್ಯಾಂಟ್ಸ್ ಲೇನ್, ಬಂಟ್ಸ್ ಹಾಸ್ಟೆಲ್, ಪಾತ್ರಪೋ ಲೇನ್, ವುಡ್ಲ್ಯಾಂಡ್, ಗೋಲ್ಫ್ ಇಂಚ್, ಜ್ಯೋತಿ ಟಾಕೀಸ್, ಲೈಟ್ಹೌಸ್ ಹಿಲ್, ಲೇಡೀಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಕುಲಶೇಖರ ಉಪಕೇಂದ್ರ ವ್ಯಾಪ್ತಿ (ಬೆಳಿಗ್ಗೆ 10 – ಸಂಜೆ 5):

ಕುಡುಪು ಕಟ್ಟೆಯ ಬಳಿ 110ಕೆವಿ ವಿದ್ಯುತ್ ವಾಹಕ ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ; ಕುಡುಪು, ಮುಂಡ್ರೆಲ್ಲಾ, ಪಿಲಿಕುಮೇರಿ, ರಥಬೀದಿ ಹಾಗೂ ಕುಡುಪು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ. ಗ್ರಾಹಕರು ಈ ಬಗ್ಗೆ ಸಹಕರಿಸುವಂತೆ ಮೆಸ್ಕಾಂ ವಿನಂತಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti