“ಗಾಜಾದಂತಹ ವಿನಾಶ” ಮಾಡ್ತೀವಿ ಎಂದು ಲೆಬನಾನ್ ಗೆ ಎಚ್ಚರಿಕೆ ನೀಡಿದ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ಲೆಬನಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಹಿಜ್ಬುಲ್ಲಾಗೆ ತನ್ನ ಗಡಿಯೊಳಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವುದನ್ನು ಮುಂದುವರಿಸಿದರೆ ದೇಶವು ಗಾಝಾಗೆ ನೀಡಿದ ಹಣೆಬರಹವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಇಸ್ರೇಲಿ ಸೇನೆಯು ಲೆಬನಾನ್ ನ ದಕ್ಷಿಣ ಕರಾವಳಿಯಲ್ಲಿ ಹಿಜ್ಬುಲ್ಲಾ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿತು. ಹೆಚ್ಚುವರಿ ಪಡೆಗಳನ್ನು ನಿಯೋಜಿಸಿತು ಮತ್ತು ಈ ಪ್ರದೇಶವನ್ನು ಖಾಲಿ ಮಾಡುವಂತೆ ನಾಗರಿಕರಿಗೆ ಸಲಹೆ ನೀಡಿತು.
ಲೆಬನಾನಿನ ಜನರನ್ನು ನೇರವಾಗಿ ಉದ್ದೇಶಿಸಿ ಮಾಡಿದ ವೀಡಿಯೊ ಭಾಷಣದಲ್ಲಿ, ನೆತನ್ಯಾಹು ಅವರು ಮತ್ತಷ್ಟು ವಿನಾಶವನ್ನು ತಪ್ಪಿಸಲು ತಮ್ಮ ದೇಶವನ್ನು ಹಿಜ್ಬುಲ್ಲಾದ ಹಿಡಿತದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿದರು. “ಗಾಝಾದಲ್ಲಿ ನೀವು ನೋಡಿದಂತೆ ವಿನಾಶ ಮತ್ತು ನೋವಿಗೆ ಕಾರಣವಾಗುವ ಸುದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಲೆಬನಾನ್ ಅನ್ನು ಉಳಿಸಲು ನಿಮಗೆ ಅವಕಾಶವಿದೆ” ಎಂದು ಅವರು ಹೇಳಿದ್ದಾರೆ.
ಹಿಜ್ಬುಲ್ಲಾವನ್ನು ನಿಭಾಯಿಸದಿದ್ದರೆ, ಲೆಬನಾನ್, ಗಾಝಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ವ್ಯಾಪಕವಾದ ವಿನಾಶವನ್ನು ನೀವು ಅನುಭವಿಸುವ ಅಪಾಯವನ್ನು ಎದುರಿಸಬಹುದು ಎಂದು ಬೆದರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth