ಹಮಾಸ್-ಇಸ್ರೇಲ್ ನಡುವಿನ ಸಮರಕ್ಕೆ ಒಂದು ವರ್ಷ: ಗಾಝಾದಲ್ಲಿ ಕಣ್ಣೀರ ಬದುಕು
ಹಮಾಸ್-ಇಸ್ರೇಲ್ ನಡುವಿನ ಸಮರಕ್ಕೀಗ ಒಂದು ವರ್ಷ. ಅಕ್ಟೋಬರ್ 7, 2023 ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿತ್ತು. ಅಷ್ಟೇ ಅಲ್ಲದೇ ಹಮಾಸ್ 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಇದರ ನೆಪದಲ್ಲಿ ಗಾಜಾದ ಮೇಲೆ ನಿರಂತರ ದಾಳಿ ನಡೆಸಿದ ಇಸ್ರೇಲ್ ರಾಜ್ಯದ ಜನಜೀವನ ಸಂಪೂರ್ಣ ನಾಶ ಮಾಡಿದ್ದು ಈವರೆಗೆ 10700 ಜನರನ್ನ ಕೊಂದಿದೆ.
ಈವರೆಗಿನ ಯಾವುದೇ ಕದನವಿರಾಮಕ್ಕೂ ಬೆಲೆ ಕೊಡದ ಇಸ್ರೇಲ್, ಹಮಾಸ್ ನೆಪದಲ್ಲಿ ಗಾಜಾದ ಮೇಲೆ ಪದೇ ಪದೇ ದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ಮೂರು ವಾರಗಳವರೆಗೆ ಗಾಜಾದ ಮೇಲೆ 6000 ಬಾಂಬ್ಗಳನ್ನು ಹಾರಿಸಿತ್ತು.
ಇಸ್ರೇಲ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಅಮೆರಿಕ ಪೂರೈಸುತ್ತದೆ, ಕಳೆದ ಒಂದು ವರ್ಷದಲ್ಲಿ, ಇಸ್ರೇಲ್ ಅಮೆರಿಕದೊಂದಿಗೆ 100 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಒಪ್ಪಂದಗಳನ್ನು ಮಾಡಿಕೊಂಡಿದೆ.
ಇದರರ್ಥ ಪ್ರತಿ 36 ಗಂಟೆಗಳಿಗೆ ಸರಿಸುಮಾರು ಒಂದು ಒಪ್ಪಂದ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್ ಮಾತ್ರವಲ್ಲ ಇಡೀ ವಿಶ್ವವೇ ಈ ಯುದ್ಧದಲ್ಲಿ ನೋವು ಅನುಭವಿಸಿದೆ. ಇಸ್ರೇಲ್ ಅತಿ ಹೆಚ್ಚು ಎಫ್-35, ಎಫ್-16, ಎಫ್-15 ಯುದ್ಧ ವಿಮಾನಗಳನ್ನು ಬಳಸಿದೆ, ಇಸ್ರೇಲ್ ಗಾಜಾ ಮತ್ತು ಲೆಬನಾನ್ ಮೇಲೆ ಸುಮಾರು 14 ಸಾವಿರ ಶೆಲ್ ಗಳನ್ನು ಹಾರಿಸಿದೆ. ಇವುಗಳು ಹೆಚ್ಚು ಸ್ಫೋಟಕ ಚಿಪ್ಪುಗಳು, ಅವು ಬೀಳುವಲ್ಲೆಲ್ಲಾ ವಿನಾಶವನ್ನು ಸೃಷ್ಟಿಸುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth