ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್‌ ಬಳಕೆ ವಿಚಾರ: ಮಸೀದಿಯ ಇಮಾಮರಿಗೆ ದಂಡ - Mahanayaka
5:42 AM Thursday 23 - January 2025

ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್‌ ಬಳಕೆ ವಿಚಾರ: ಮಸೀದಿಯ ಇಮಾಮರಿಗೆ ದಂಡ

14/12/2024

ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್ ಬಳಸಿದ್ದಕ್ಕಾಗಿ ಸಂಭಾಲ್ ಮಸೀದಿಯ ಇಮಾಮರ ಮೇಲೆ ಉತ್ತರ ಪ್ರದೇಶದ ಪೊಲೀಸರು 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಕೋಡ್ ಗಾರವಿ ಪ್ರದೇಶದ ಅನಾರ್ವಾಲಿ ಮಸೀದಿಯ ಇಮಾಮರ ಮೇಲೆ ಈ ದಂಡವನ್ನು ವಿಧಿಸಲಾಗಿದೆ. ಇತ್ತೀಚೆಗೆ ಸಂಬಲ್ ನ ಶಾಹಿ ಮಸೀದಿಯ ಸರ್ವೆ ನಡೆದದ್ದು ಮತ್ತು ಹಿಂಸಾಚಾರಕ್ಕೆ ನಾಲ್ಕು ಮಂದಿ ಮುಸ್ಲಿಂ ಯುವಕರು ಮೃತಪಟ್ಟ ಅದೇ ಪ್ರದೇಶದಲ್ಲಿ ಈ ಮಸೀದಿಯಿದೆ.

ಮಸೀದಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್ ಬಳಸಿದ್ದಕ್ಕಾಗಿ 23 ವರ್ಷದ ತಹಸೀಬ್ ಎಂಬ ಇಮಾಮರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಬಳಿಕ ಅವರಿಗೆ ಜಾಮೀನು ನೀಡಿದ್ದೇವೆ ಎಂದು ಸಂಬಾಲ್ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ ವಂದನ ಮಿಶ್ರ ಹೇಳಿದ್ದಾರೆ.

ಈಗಾಗಲೇ ಸಂಭಾಲ್ ಸುದ್ದಿಯಲ್ಲಿದೆ. ನ್ಯಾಯಾಲಯ ದಿಢೀರಾಗಿ ಶಾಹಿ ಮಸೀದಿಯ ಸರ್ವೆಗೆ ಅನುಮತಿ ನೀಡಿದ್ದು ಮತ್ತು ಸರ್ವೆ ನಡೆಸಲು ಬಂದ ಅಧಿಕಾರಿಗಳ ಬಗ್ಗೆ ಅನುಮಾನಗೊಂಡ ಊರವರು ಪ್ರತಿಭಟನೆಗೆ ತೊಡಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದು ಎಲ್ಲವೂ ಹಸಿ ಹಸಿ ಇರುವಾಗಲೇ ಈ ದಂಡ ಪ್ರಯೋಗ ನಡೆದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ