12:03 PM Wednesday 15 - October 2025

ಪ್ರವಾಹದ ಬೆನ್ನಲ್ಲೇ ಮನೆಯ ತಾರಸಿ, ರಸ್ತೆಯಲ್ಲಿ ಪತ್ತೆಯಾಗ್ತಿವೆ ಮೊಸಳೆಗಳು!

crocodile
28/07/2021

ಪೂನಾ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆದ ಭಾರೀ ಮಳೆ, ಪ್ರವಾಹದಿಂದಾಗಿ ನಗರದ ವಿವಿಧ ಕಡೆಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರುವ ಮೊಸಳೆಗಳು ಜನ ವಸತಿ ಪ್ರದೇಶಗಳಲ್ಲಿ ಪತ್ತೆಯಾಗುತ್ತಿವೆ. ಇದರಿಂದಾಗಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

 

ಸಾಂಗ್ಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೃಷ್ಣ ನದಿ ನೀರು ಉಕ್ಕಿ ಹರಿಯುತ್ತಿರುವುದರಿಂದ ರಸ್ತೆಗಳೆಲ್ಲಾ ಮೋರಿಗಳಾಂತಾಗಿದ್ದು, ರಸ್ತೆಗಳು, ಕೆಲ ಮನೆಗಳ ತಾರಸಿ ಮೇಲೆ ಮೊಸಳೆಗಳು ಕಾಣಿಸಿಕೊಂಡಿವೆ.

 

ಇನ್ನೂ ಮೊಸಳೆಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಪ್ರದೇಶಗಳಾದ ಬಿಲ್ವಾಡಿ, ಮಲ್ವಾಡಿ, ದಿಗ್ರಜ್, ಚೋಪಡೆವಾಡಿ, ಮತ್ತಿತರ ಪ್ರದೇಶಗಳಲ್ಲಿ ಮೊಸಳೆಗಳಿಂದ ಆಗುವ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿ ವಿಜಯ್ ಮಾನೆ ತಿಳಿಸಿದ್ದಾರೆ.

 

ಇನ್ನಷ್ಟು ಸುದ್ದಿಗಳು…

“ನಮ್ಮನ್ನು ಕೈ ಬಿಡಬೇಡಿ…”! ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಹಿಂದೆ ಬಿದ್ದ ಮಾಜಿ ಸಚಿವರು, ಶಾಸಕರು!

ಅತ್ತೆಯನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ ಸೊಸೆ | ಸಿನಿಮೀಯ ಶೈಲಿಯಲ್ಲಿ ಹತ್ಯೆ ನಡೆಸಿದ್ದ ಆರೋಪಿಗಳು

ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್

ಇತ್ತೀಚಿನ ಸುದ್ದಿ

Exit mobile version