10:14 AM Saturday 15 - November 2025

ಯಾವತ್ತಾದರೂ ನೀವು ಕಂಬಳ ನೋಡಿದ್ದೀರಾ?: ಪೋಸ್ಟರ್‌ ಮೂಲಕ ಕುತೂಹಲ ಸೃಷ್ಟಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯ

kambala
23/12/2022

ಜೀವಮಾನದಲ್ಲಿ ಒಮ್ಮೆಯಾದರೂ ಕಂಬಳ ನೋಡಬೇಕು ಎಂದು ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕುರಿತಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಪೋಸ್ಟರ್‌ ವೊಂದನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಕಂಬಳ ಕ್ರೀಡೆಯು ಕರಾವಳಿ ಕರ್ನಾಟಕದ ರೈತ ಸಮುದಾಯದ ನೆಚ್ಚಿನ ಕ್ರೀಡೆಯಾಗಿದೆ. ವಾರ್ಷಿಕ ಕ್ರೀಡೆಯಾಗಿ ಕಂಬಳ ಓಟವನ್ನು ಆಯೋಜಿಸುತ್ತಾರೆ. 150ಕ್ಕೂ ಹೆಚ್ಚು ಜೋಡಿ ಕೋಣಗಳು ತರಬೇತಿ ಪಡೆದು ಇದರಲ್ಲಿ ಪಾಲ್ಗೊಳ್ಳುತ್ತವೆ ಎಂದು ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಗ್ರಾಮಸ್ಥರಿಗೆ ಮತ್ತು ಪ್ರವಾಸಿಗರಿಗೆ ಇದೊಂದು ಮರೆಯಲಾಗದ ಸಂದರ್ಭವಾಗಿದ್ದು, ನೀವು ಇದಕ್ಕೂ ಮುಂಚೆ ಯಾವತ್ತಾದರೂ ಕಂಬಳ ನೋಡಿದ್ದೀರಾ ಎಂದು ಪ್ರಶ್ನಿ ಕೂಡಾ ಮಾಡಿದೆ.

ಗೇಮ್ಸ್‌ ಆಫ್‌ ಇಂಡಿಯಾ ಮತ್ತು ಅಮೃತ ಮಹೋತ್ಸವ ಹ್ಯಾಷ್‌ ಟ್ಯಾಗ್‌ನಲ್ಲಿ ಮಾಡಿರುವ ಟ್ವೀಟನ್ನು ಹಲವರು ರೀಟ್ವೀಟ್‌ ಮಾಡಿದ್ದು, ಲೈಕ್‌ ಮತ್ತು ಕಮೆಂಟ್‌ ಕೂಡ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version