ಹಿಂದೂ ಸಮಾಜೋತ್ಸವ: ಶರಣ್ ಪಂಪ್ ವೆಲ್ ಉಡುಪಿ ಪ್ರವೇಶಿಸಕ್ಕೆ ತಡೆ
10/10/2023
ಉಡುಪಿ: ವಿಎಚ್‌ಪಿ- ಬಜರಂಗದಳ ವತಿಯಿಂದ ಉಡುಪಿಯಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವದಲ್ಲಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಭಾಗವಹಿಸದಂತೆ ತಡೆಯೊಡ್ಡಲಾಗಿದೆ.
ಇತ್ತೀಚೆಗೆ ನಡೆದ ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಪ್ರತಿಭಟನೆಯಲ್ಲಿ ಶರಣ್ ಪಂಪ್’ವೆಲ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸೋಮೋಟೊ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಪಂಪ್’ವೆಲ್’ಗೆ ದ.ಕ. ಜಿಲ್ಲೆ ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಲಾಗಿದೆ. ಅದರಂತೆ ಪೊಲೀಸರು ಅವರಿಗೆ ಇಂದಿನ ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸ ದಂತೆ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸುವ ಸಾಧ್ಯತೆಯನ್ನು ಅರಿತ ಪಂಪ್ ವೆಲ್, ಹೆಜಮಾಡಿಯಿಂದಲೇ ಮಂಗಳೂರಿಗೆ ವಾಪಸ್ಸು ಆಗಿದ್ದಾರೆಂದು ತಿಳಿದುಬಂದಿದೆ.

























