ಅತ್ತೆ ಮಗಳ ಮೇಲೆ ಪ್ರೀತಿ: ಯುವತಿಗೆ ಆ್ಯಸಿಡ್ ದಾಳಿ ನಡೆಸಿ, ಪೆಟ್ರೋಲ್ ಸುರಿದು ಆತ್ಮಹತ್ಯೆ ಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

chikkaballapur
09/07/2025

ಚಿಕ್ಕಬಳ್ಳಾಪುರ(Mahanayaka): ಮದುವೆಗೆ ನಿರಾಕರಿಸಿದ ಯುವತಿ ಮನೆಯ ಮುಂದೆ ಹೈಡ್ರಾಮ ಸೃಷ್ಟಿಸಿರುವ ಯುವಕನೊಬ್ಬ, ಯುವತಿ ಮೇಲೆ ಆ್ಯಸಿಡ್ ಎರಚಿ, ತಾನೂ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಯುವಕನಿಗೆ ಗಂಭೀರವಾಗಿ ಗಾಯಗಳಾಗಿದ್ದರೆ, ಯುವತಿ ಅಪಾಯದಿಂದ ಪಾರಾಗಿದ್ದಾಳೆ.

ಸದ್ಯ ಆಸ್ಪತ್ರೆಯಲ್ಲಿ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆನಂದ್ ಕುಮಾರ್ ಶಿಡ್ಲಘಟ್ಟ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಿಂತಾಮಣಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ.

ತನ್ನ ಅತ್ತೆ ಮಗಳ ಮೇಲೆ ಆನಂದ್ ಕುಮಾರ್ ಗೆ ಪ್ರೀತಿಯಾಗಿತ್ತು. ಆಕೆಯನ್ನು ಮದುವೆ ಮಾಡಿಕೊಡುವಂತೆ  ದಿನ ನಿತ್ಯ ಕಾಟ ಕೊಡುತ್ತಿದ್ದನಂತೆ, ಹೀಗಾಗಿ ಯುವತಿ ಮನೆಯವರು ಯುವತಿನ್ನು ಸಂಬಂಧಿಕರ ಮನೆಯಿರುವ ಮಂಚನಬಲೆ ಗ್ರಾಮದಲ್ಲಿ ಬಿಟ್ಟಿದ್ದರು. ಆಕೆ ಅಲ್ಲಿಯೇ ಇದ್ದುಕೊಂಡು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಳು.  ಆದರೆ ಅಲ್ಲಿಗೂ ಹೋಗಿದ್ದ ಆನಂದ್ ಕುಮಾರ್, ಆಕೆಯನ್ನು ಕಳುಹಿಸುವಂತೆ ಹೇಳಿದ್ದಾನೆ, ಅಲ್ಲದೇ ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ಇದಕ್ಕೆ ಅವಕಾಶ ಸಿಗದೇ ಇದ್ದಾಗ ಮಲಗಿದ್ದ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ ನಂತರ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version