ಆ.13 ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ

vatal nagaraj
31/07/2026

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶವನ್ನು ವಿರೋಧಿಸಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕನ್ನಡಪರ ಹಾಗೂ ರೈತ ಸಂಘಟನೆಗಳ ಒಕ್ಕೂಟವು ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕನ್ನಡಪರ ಸಂಘಟನೆಗಳ ಒಕ್ಕೂಟದ ಮಹತ್ವದ ಸಭೆಯ ಬಳಿಕ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಬಂದ್ ಘೋಷಣೆ ಮಾಡಿದರು.

ಆಗಸ್ಟ್ 13ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅಖಂಡ ಕರ್ನಾಟಕ ಬಂದ್ ನಡೆಯಲಿದೆ. ರಾಜ್ಯದ ಜನತೆ ಹಾಗೂ ರೈತ ಬಾಂಧವರು ಯಾವುದೇ ವಿರೋಧ ವ್ಯಕ್ತಪಡಿಸದೆ, ನೈತಿಕ ಬೆಂಬಲದ ಜೊತೆಗೆ ಬಂದ್ನಲ್ಲಿೂರ್ಣವಾಗಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ತಮಿಳುನಾಡಿನೊಂದಿಗೆ ಯುದ್ಧ ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ ಕಾವೇರಿ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ನಮಗೆ ತೀವ್ರ ತೊಂದರೆ ಕೊಡುತ್ತಾ ಬಂದಿದೆ ಎಂದರು.

ಪ್ರತಿದಿನ 3,500 ಕ್ಯೂಸೆಕ್ ನೀರು ಬಿಟ್ಟರೆ ಕೆಆರ್ಎಸ್ ಜಲಾಶಯ ಸಂಪೂರ್ಣ ಖಾಲಿಯಾಗಿ ಮೈದಾನದಂತಾಗುತ್ತದೆ. ಮುಖ್ಯಮಂತ್ರಿಗಳು ಆನೇಕಲ್ ಬದಲು ಕೆಆರ್ ಎಸ್ ಲ್ಲೇ ಕ್ರಿಕೆಟ್ ಮೈದಾನ ಮಾಡಲಿ, ಎಲ್ಲರೂ ಬಂದು ನಮ್ಮ ಸಮಾಧಿ ಮೇಲೆ ಕ್ರಿಕೆಟ್ ಆಡಲಿ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.

ತಮಿಳುನಾಡು ಮುಖ್ಯಮಂತ್ರಿಗಳು ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ಬರುವುದಾದರೆ ಅಂತಹ ದಿನ ನಾವು ಏರ್ಪೋರ್ಟ್ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸೌಹಾರ್ದಯುತವಾಗಿ ಬೇರೆ ವಿಚಾರಗಳ ಚರ್ಚೆಗೆ ಬಂದರೆ ಸ್ವಾಗತ ಎಂದರು.

ಇದು ನಿಜವಾದ ಸರ್ವಪಕ್ಷ ಸಭೆಯಲ್ಲ, ಕೇವಲ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಭೆಯಾಗಿದೆ. ನೀರಾವರಿ ತಜ್ಞರು ಮತ್ತು ಹೋರಾಟಗಾರರನ್ನು ಕರೆಯದೆ ನಡೆಸುವ ಇಂತಹ ನಾಟಕೀಯ ಸಭೆಗಳನ್ನು ನಾಡಿನ ಜನತೆ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version