ಮನೆ ಬಾಡಿಗೆ ನೀಡದ್ದಕ್ಕೆ ವ್ಯಾಘ್ರಗೊಂಡ: ಲಕ್ವ ಪೀಡಿತ ವ್ಯಕ್ತಿ ಜೊತೆ ಮನೆ ಮಾಲೀಕನ ದುರ್ವರ್ತನೆ

ಮನೆ ಬಾಡಿಗೆ ನೀಡದ ವ್ಯಕ್ತಿಯೊಂದಿಗೆ ಮನೆ ಮಾಲೀಕ ಹೇಗೆಲ್ಲ ವರ್ತಿಸಬಹುದು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೊಂದು ಉತ್ತರ ಇಲ್ಲಿದೆ. ಲಕ್ವ ಪೀಡಿತರಾಗಿದ್ದ ವ್ಯಕ್ತಿ ಸರಿಯಾಗಿ ಬಾಡಿಗೆ ನೀಡದೇ ಇರುವುದಕ್ಕೆ ತಮಿಳುನಾಡಿನ ಮನೆ ಮಾಲೀಕ ಅತ್ಯಂತ ಕ್ರೂರವಾಗಿ ನಡೆದುಕೊಂಡ ಘಟನೆ ಇದು. ವ್ಯಕ್ತಿ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ. ಆದ್ದರಿಂದ ಅದಕ್ಕೆ ತೆರಳುವ ಮೆಟ್ಟಿಲುಗಳನ್ನು ಆತ ಕಿತ್ತೆಸೆದು ಕ್ರೂರವಾಗಿ ನಡೆದುಕೊಂಡಿದ್ದಾನೆ.
ಹಾಸಿಗೆ ಪೀಡಿತರಾಗಿದ್ದ ವೇಣುಗೋಪಾಲ್ ಮತ್ತು ಅವರ ಕುಟುಂಬ ವಾಸಿಸುತ್ತಿದ್ದ ಬಾಡಿಗೆ ಮನೆಯ ಮೆಟ್ಟಿಲುಗಳನ್ನು ಮಾಲಕ ಶ್ರೀನಿವಾಸ್ ಒಡೆದು ಹಾಕಿದ್ದಾರೆ. ಹಾಸಿಗೆ ಹಿಡಿದ ಕಾರಣ ವೇಣುಗೋಪಾಲ್ ಅವರಿಗೆ ಬಾಡಿಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ವೇಣುಗೋಪಾಲ್ ಅವರು ಮನೆ ಬಿಡುವುದಕ್ಕೆ ಹೆಚ್ಚು ಕಾಲಾವಕಾಶವನ್ನು ಕೇಳಿದರು ಮಾತ್ರವಲ್ಲ ಅದಕ್ಕೆ ವಕೀಲರ ಸಹಾಯವನ್ನೂ ಪಡೆದರು.
ಇದು ಮಾಲಕನಲ್ಲಿ ಸಿಟ್ಟು ತರಿಸಿತು ಮತ್ತು ಅವರು ಮೆಟ್ಟಿಲುಗಳನ್ನು ಒಡೆದು ಹಾಕಲು ಕಾರಣವಾಯಿತು. ಈ ಬಗ್ಗೆ ಅಕ್ಕಪಕ್ಕದವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಅಧಿಕಾರಿಗಳು ಬಂದು ಏಣಿ ಉಪಯೋಗಿಸಿ ಕುಟುಂಬದವರನ್ನು ಕೆಳಗಿಳಿಸಿದರಲ್ಲದೆ ಹಗ್ಗದ ಮೂಲಕ ವೇಣುಗೋಪಾಲ್ ಅವರನ್ನು ಕೆಳಗಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth