9:59 AM Thursday 16 - October 2025

ಮಂಗಳೂರಿನ ಮಲೈಕಾದಲ್ಲಿ ಭಾರೀ ವಂಚನೆ | ಕಂಪೆನಿಯಲ್ಲಿ ಹಣ ಇಟ್ಟವರಿಗೆ ಮೂರು ನಾಮ! | ಆತಂಕದಲ್ಲಿ ಗ್ರಾಹಕರು

22/11/2020

ಮಂಗಳೂರು: ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯು ಸುಮಾರು 350 ಕೋಟಿಗೂ ಅಧಿಕ ವಂಚನೆ ಮಾಡಿದ್ದು,  ತಿಂಗಳ ಬಡ್ಡಿಯ ಸ್ಕೀಮ್ ನಲ್ಲಿ ಹಣವಿಟ್ಟವರಿಗೆ ಕಂಪೆನಿಯೂ ಮೂರು ನಾಮ ಹಾಕಿ ತನ್ನ ಸಂಸ್ಥೆಯ ಕಚೇರಿ ಬಾಗಿಲು ಮುಚ್ಚಿದೆ.

ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಶಾಖೆಯೊಂದರಲ್ಲಿಯೇ ಜನರಿಗೆ 40 ಕೋಟಿಗೂ ಅಧಿಕ ಹಣ ಪಂಗನಾಮ ಹಾಕಿದ್ದು, ಫಿಕ್ಸ್ ಡೆಪಾಸಿಟ್ ಇಟ್ಟಿರುವ 800ಕ್ಕೂ ಅಧಿಕ ಜನ ಇದೀಗ ಕಂಗಾಲಾಗಿ ಕುಳಿತಿದ್ದಾರೆ.

ಮಂಗಳೂರು, ಮುಂಬೈ ನಲ್ಲಿರುವ ಶಾಖೆಗಳಲ್ಲಿ ಮಲೈಕಾ ಸಂಸ್ಥೆ, ಫಿಕ್ಸ್ ಡೆಪಾಸಿಟ್ ಹಣ ವಾಪಸ್ ಕೊಡದೇ ಗ್ರಾಹಕರಿಗೆ ವಂಚನೆ ಎಸಗಿದೆ.  ಇದರ ಪ್ರಧಾನ ಕಚೇರಿ ಮಂಗಳೂರಿನ ಬೆಂದೂರ್ ವೆಲ್ ನಲ್ಲಿದ್ದು, ಈ ಕಚೇರಿಗೆ ಬಾಗಿಲು ಹಾಕಲಾಗಿದೆ.

ಇನ್ನೂ ವಂಚನೆಗೊಳಗಾದ ಗ್ರಾಹಕರು ಮಂಗಳೂರಿನ ಪಾಂಡೇಶ್ವರ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪಿಸ್ಟ್ ಸೇರಿದಂತೆ ಆಡಳಿತ ಸಂಸ್ಥೆಯ 12 ಮಂದಿಗೂ ಅಧಿಕ ಜನರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಮಂಗಳೂರು ಕ್ರೈಮ್ ಬ್ರಾಂಚ್, ಮ್ಯಾನೇಜರ್ ರೀನಾ ಜೋಶ್ ಅವರನ್ನು ಬಂಧಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version