4:07 PM Wednesday 9 - September 2026

ಕಡವೆ ಶಿಖಾರಿ ಮಾಡಿದ್ದ ವ್ಯಕ್ತಿಯ  ಬಂಧನ: ವಾಹನ , 2 ಕೋವಿ ವಶ

chikkamagaluru
19/01/2025

ಚಿಕ್ಕಮಗಳೂರು : ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿ ಓರ್ವನನ್ನು ಬಂಧಿಸಿರುವ ಅರಣ್ಯ ಸಂಚಾರಿ ದಳ ವಾಹನ ಸಹಿತ ಎರಡು ಕೋವಿ ವಶಪಡಿಸಿಕೊಂಡಿದೆ.

ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್, ತೋಗರಿಹಂಕಲ್ ಗ್ರಾಮದ ಸರ್ವೇ ಸಂಖ್ಯೆ 37 ರಲ್ಲಿ  ಕೂತನ್ಕುಲ್ ಎಸ್ಟೇಟ್ ನಲ್ಲಿ ಇಂದು ನಸುಕಿನಲ್ಲಿ ತೋಟದ ರೈಟರ್ ದೇವಯ್ಯ ಕಡವೆ  ಶಿಖಾರಿ ಮಾಡಿದ್ದ.

ಶಿಕಾರಿ ಬಳಿಕ ಮಾಂಸವನ್ನು ತುಂಡು ಮಾಡುತ್ತಿದ್ದಾಗ  ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ  ದೇವಯ್ಯನನ್ನು ಬಂಧಿಸಿ ವನ್ಯಜೀವಿ ಸಾಂಬಾರ್ ಜಿಂಕೆಯ ಅಂದಾಜು 40 KG ಮಾಂಸ ಮತ್ತು ಚರ್ಮ, ಚೂರಿ ಹಾಗೂ ಬೇಟೆಗೆ ಬಳಸುತ್ತಿದ್ದ 2 Rifle ಗಳನ್ನು ವಶಕ್ಕೆ ಪಡೆದಿದ್ದಾರೆ.

ಒಂಟಿ ನಳಿಕೆ ರೈಫಲ್ ಹಾಗೂ ಐವತ್ತಕ್ಕೂ ಹೆಚ್ಚು ಜೀವಂತ ಬಳಸಿದ ಗುಂಡು ಪತ್ತೆಯಾಗಿದೆ. ವನ್ಯಜೀವಿ  ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರಹಾರ್ಶ್, ಪೂರಪ್ಪ ಮತ್ತು ಇತರರು ಪಾಲ್ಗೊಂಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version