ತನ್ನ ಭುಜದ ಮೇಲೆ ತಲೆ ಇಟ್ಟು ನಿದ್ದೆ ಮಾಡಿದ್ದಕ್ಕೆ ಗರಂ: ರೈಲಲ್ಲಿ ಸಹಪ್ರಯಾಣಿಕನ ಮೇಲೆ ಹಲ್ಲೆ

28/08/2023

ವ್ಯಕ್ತಿಯೋರ್ವ ನಿದ್ದೆ ಮಂಪರಿನಲ್ಲಿ ತನ್ನ ಭುಜದ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿ ಆತನ ಮೇಲೆ ಹಲ್ಲೆ ಮಾಡಿದ ಘಟನೆ ನ್ಯೂಯಾರ್ಕ್​ನ ಸಬ್​ಅರ್ಬನ್​ ರೈಲಿನಲ್ಲಿ ನಡೆದಿದೆ. ಹಲ್ಲೆ ನಡೆಸುತ್ತಿರುವ ವಿಡಿಯೋ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ಅಲ್ಲದೇ ಹಲ್ಲೆ ನಡೆಸಿರುವ ವ್ಯಕ್ತಿಯ ವಿರುದ್ಧ ನೆಟ್ಟಿಗರು ಕಿಡಿಕಾರಿ ಬಂಧನಕ್ಕೆ ಆಗ್ರಹಿಸಿದ್ದಾರೆ.

ಸಬ್​ಅರ್ಬನ್ ರೈಲಿನಲ್ಲಿ ನಡೆದ ಘಟನೆಯ ವಿಡಿಯೋದಲ್ಲಿ ವ್ಯಕ್ತಿಯೋರ್ವ ತನ್ನ ಮುಂದೆ ಕುಳಿತಿರುವ ಪ್ರಯಾಣಿಕನನ್ನು ಶಪಿಸುತ್ತಾನೆ. ಇದಾದ ಕೆಲವೇ ನಿಮಿಷಗಳಲ್ಲಿ ತನ್ನ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕ ನಿದ್ದೆ ಮಂಪರಿನಲ್ಲಿ ತಲೆ ಒರಗಿಸಿದ ಎಂಬ ಕಾರಣಕ್ಕೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇರೆಡೆಗೆ ಹೋಗಿ ಮಲಗುವಂತೆ ಹೇಳುತ್ತಾನೆ.

ಇದ್ಯಾವುದಕ್ಕೂ ಕೇರ್​ ಮಾಡದೆ ಸಹ ಪ್ರಯಾಣಿಕ ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿರುತ್ತಾನೆ. ಇದರಿಂದ ತೀವ್ರವಾಗಿ ಕೋಪಗೊಂಡ ಆ ವ್ಯಕ್ತಿ ಕೂಡಲೇ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸುತ್ತಾನೆ. ಇದನ್ನು ಕಂಡ ಆತನ ಸ್ನೇಹಿತ ವ್ಯಕ್ತಿಯ ಜೊತೆ ಜಗಳಕ್ಕಿಳಿಯುತ್ತಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಹೊಡೆದಾಡಿಕೊಳ್ಳುತ್ತಾರೆ. ರೈಲಿನಲ್ಲಿರುವ ಪ್ರಯಾಣಿಕರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಾರೆ.

ಇತ್ತೀಚಿನ ಸುದ್ದಿ

Exit mobile version