9:58 AM Wednesday 28 - January 2026

ಬಸ್ ಇಲ್ಲದೇ ಪರದಾಟ: ಆ್ಯಂಬುಲೆನ್ಸ್ ನಲ್ಲಿ ಕಾಲೇಜಿಗೆ ತೆರಳಿದ ನರ್ಸಿಂಗ್ ವಿದ್ಯಾರ್ಥಿಗಳು!!

chamarajanagara
29/09/2023

ಚಾಮರಾಜನಗರ: ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ಜೋರಾಗಿದ್ದು, ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿದಿಲ್ಲ.

ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್ ಗಳಿಲ್ಲದೇ ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್ ಗಾಗಿ ಕಾದು ಕಾದು ಸುಸ್ತಾದರು‌.

ಎರಡು ತಾಸಿನ ಬಳಿಕ ಆ್ಯಂಬುಲೆನ್ಸ್  ಸಿಮ್ಸ್ ಕಳುಹಿಸಿದ್ದರಿಂದ ಆಂಬುಲೆನ್ಸ್ ನಲ್ಲೇ ರೋಗಿಗಳ ಬದಲು ನರ್ಸಿಂಗ್ ವಿದ್ಯಾರ್ಥಿಗಳ ಪಯಣಿಸಿದರು‌‌. ಆಂಬುಲೆನ್ಸ್ ನಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ನರ್ಸಿಂಗ್  ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದರು.

ಇತ್ತೀಚಿನ ಸುದ್ದಿ

Exit mobile version