11:36 AM Tuesday 21 - October 2025

ರಾಜಕಾರಣಿಯಾಗಿ ಮಿಂಚಲು ರೆಡಿಯಾದ ಪ್ರಶಾಂತ್ ಸಂಬರ್ಗಿ!

prashant sambargi
10/03/2023

ಬೆಂಗಳೂರು:ಬಿಗ್ ಬಾಸ್  ಶೋ ಮೂಲಕ ಮನೆ ಮಾತಾದ ಪ್ರಶಾಂತ್ ಸಂಬರ್ಗಿಇದೀಗ ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆಯಲ್ಲಿ ರಾಜಕಾರಣಿಯಾಗಿ ಮಿಂಚಲು ರೆಡಿಯಾಗಿದ್ದಾರೆ.

ದೊಡ್ಮನೆಯಲ್ಲಿ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. `ಕೆಂಡಸಂಪಿಗೆ’  ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಮುಂದೆ ಸೆಡ್ಡು ಹೊಡೆಯಲು ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ಬಾರಿಗೆ ರಾಜಕಾರಣಿ ಪಾತ್ರದ ಮೂಲಕ ಸಂಬರ್ಗಿ ನಟಿಸಿದ್ದಾರೆ. ಭೈರತಿ ಕುಣಿಗಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಅವಕಾಶ ಮೊದಲು ಹೆಸರಾಂತ ನಟ ಅವಿನಾಶ್‌ಗೆ ಸಿಕ್ಕಿತ್ತು. ಡೇಟ್ ಕ್ಲಾಶ್ ಆದ ಕಾರಣ, ಪ್ರಶಾಂತ್ ಸಂಬರ್ಗಿ ಅವರಿಗೆ ಅವಕಾಶ ಒಲಿದು ಬಂತು.

ಅತಿಥಿ ಪಾತ್ರದ ಮೂಲಕ ಕಿರುತೆರೆ ಸಿನಿ ಪ್ರೇಕ್ಷಕರಿಗೆ ರಂಜಿಸಲು ಸಂಬರ್ಗಿ ರೆಡಿಯಾಗಿದ್ದಾರೆ. ದೊಡ್ಮನೆಯಲ್ಲಿ ಗಮನ ಸೆಳೆದ ಸಂಬರ್ಗಿ ಈಗ ರಾಜಕಾರಣಿಯಾಗಿ ಟಿವಿ ಪರದೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಕಾದುನೋಡಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version