ವಿದ್ಯಾರ್ಥಿನಿ ಜೊತೆಗೆ ಅಸಭ್ಯ ವರ್ತನೆ ಆರೋಪ: ಪ್ರಾಂಶುಪಾಲನ ಮೇಲೆ ಪೋಷಕರಿಂದ ಹಲ್ಲೆ

belagavi
13/12/2025

ಬೆಳಗಾವಿ: ಗರ್ಲ್ಸ್​ ಹೈಸ್ಕೂಲ್‌ ನ ಪ್ರಾಂಶುಪಾಲ ವಿದ್ಯಾರ್ಥಿನಿ ಜತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ಆರೋಪ ಮಾಡಿ ಗ್ರಾಮಸ್ಥರು ಪ್ರಾಂಶುಪಾಲನ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದಿದೆ.

ಪ್ರಾಂಶುಪಾಲ ಕಲ್ಲಪ್ಪ ಬೆಳಗಾಂವಕರ್ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ಬಗ್ಗೆ  ಪೋಷಕರು ಸ್ಥಳೀಯ ನಾಯಕರಿಗೆ ದೂರು ನೀಡಿದ್ದರು ಆದರೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶಗೊಂಡು ಪ್ರಾಂಶುಪಾಲಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಉದ್ರಿಕ್ತ ಪೋಷಕರ ಗುಂಪು ಶಾಲೆಗೆ ಬಂದು ಪ್ರಾಂಶುಪಾಲನನ್ನು ಹೊರಗೆಳೆದುಕೊಂಡು ಬಂದು ತರಾಟೆಗೆತ್ತಿಕೊಂಡರು. ಈ ವೇಳೆ ರೊಚ್ಚಿಗೆದ್ದ ಕೆಲವು ಪೋಷಕರು ಪ್ರಾಂಶುಪಾಲನ ಮೇಲೆ ಹಲ್ಲೆ ನಡೆಸಿದ್ದಾರೆ.  ಇದರಿಂದಾಗಿ ಶಾಲಾ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಪ್ರಾಂಶುಪಾಲನಿಂದ ಅಸಭ್ಯ ವರ್ತನೆ ಬಗ್ಗೆ,  ಪ್ರಾಂಶುಪಾಲ ವಿದ್ಯಾರ್ಥಿನಿ ಜೊತೆಗೆ ಅಶ್ಲೀಲ ಮೆಸೇಜ್ ಮಾಡಿದ ಚಾಟಿಂಗ್ ಕೂಡ ಸಿಕ್ಕಿದೆ. ಈ ಬಗ್ಗೆ ಖುದ್ದು ವಿದ್ಯಾರ್ಥಿನಿಯೇ ಪೊಲೀಸ್​​ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಆರೋಪಿ ಸಚಿವರ ಆಪ್ತ ಎನ್ನುವ ಕಾರಣಕ್ಕೆ  ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version