ಬೀಟಮ್ಮ ಆ್ಯಂಡ್ ಗ್ಯಾಂಗ್ ಗೆ ಹೆದರಿ ಗ್ರಾಮಸ್ಥರಿಂದ ಪ್ರತಿಭಟನೆ: ಇಂದಾವರದಲ್ಲಿ ಬೀಡುಬಿಟ್ಟ 24 ಆನೆಗಳು!

15/02/2024
ಚಿಕ್ಕಮಗಳೂರು: ಬೀಟಮ್ಮ ಆ್ಯಂಡ್ ಗ್ಯಾಂಗ್ ಎಂದೇ ಫೇಮಸ್ ಆಗಿರುವ ಸುಮಾರು 24 ಆನೆಗಳ ತಂಡ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಆನೆಗಳ ಭೀತಿಯಿಂದ ಜನರು ಭಯಭೀತರಾಗಿದ್ದಾರೆ.
ಬೀಟಮ್ಮನ ಆ್ಯಂಡ್ ಗ್ಯಾಂಗ್ ಗೆ ಇದೀಗ ಇಂದಾವರ ಗ್ರಾಮಸ್ಥರು ಭಯಭೀತರಾಗಿದ್ದು, ತಕ್ಷಣವೇ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೀಟಮ್ಮ ಆ್ಯಂಡ್ ಗ್ಯಾಂಗ್ ಇಂದಾವರ ಸುತ್ತಮುತ್ತಾ ಬೀಡು ಬಿಟ್ಟಿದೆ. ಸುಮಾರು 24ಕ್ಕೂ ಅಧಿಕ ಆನೆಗಳ ಗುಂಪು ಗ್ರಾಮಸ್ಥರಲ್ಲಿ ಪ್ರಾಣ ಭೀತಿ ಸೃಷ್ಟಿಸಿದೆ. ಇಲ್ಲಿನ ಗ್ರಾಮಸ್ಥರು ಆತಂಕದಿಂದಲೇ ಬದುಕುವಂತಾಗಿದ್ದು, ಸ್ಥಳೀಯರು, ತೋಟಗಳಿಗೆ ಹೋಗೋದಕ್ಕೂ ಭಯಪಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ತಕ್ಷಣವೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸೂಕ್ತ ಕ್ರಮವಹಿಸಬೇಕು. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗ ಬೇಕು ಎಂದು ಚಿಕ್ಕಮಗಳೂರು ಮಲ್ಲಂದೂರು ನಡುವೆ ಇರುವ ಇಂದಾವರ ಗ್ರಾಮಸ್ಥರು ಆಗ್ರಹಿಸಿದ್ದಾರೆ.