12:45 PM Wednesday 15 - October 2025

ರಸ್ತೆಗೆ ನುಗ್ಗಿದ ನೀರು | ಲಾರಿ, ಕಾರುಗಳು ರಸ್ತೆಯಲ್ಲಿಯೇ ಮುಳುಗಡೆ

heavy rain
23/07/2021

ಬೆಳಗಾವಿ: ರಾಜ್ಯದಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು,  ಬೆಳಗಾವಿಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳು ನೀರಿನಲ್ಲಿ ಸಿಲುಕಿವೆ.

ಇಲ್ಲಿನ ವೇದ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪರಿಣಾಮವಾಗಿ ರಸ್ತೆಗೆ ನೀರು ಹರಿದು ಬಂದಿದೆ. ಭಾರೀ ಪ್ರಮಾಣದಲ್ಲಿ ನೀರು ರಸ್ತೆಗೆ ನುಗ್ಗಿದ್ದರಿಂದಾಗಿ ನಡು ರಸ್ತೆಯಲ್ಲಿಯೇ ಲಾರಿ, ಕಾರುಗಳು ಸಿಲುಕಿದ್ದು, ಚಾಲಕರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗುರುವಾರ ರಾತ್ರಿಯಿಂದಲೇ ಮುಚ್ಚಲಾಗಿದೆ. ಹೀಗಾಗಿ ಸರಕು ಸಾಗಾಣೆ ವಾಹನಗಳು ಸೇರಿದಂತೆ ವಿವಿಧ ವಾಹನಗಳ ಸಂಚಾರದಲ್ಲಿ ತೊಡಕುಂಟಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬಿಜೆಪಿಗೆ ರಾಜೀನಾಮೆ ಪರ್ವ ಆರಂಭವಾಗುತ್ತಾ? | 2ನೇ ಅಸ್ತ್ರ ಪ್ರಯೋಗಕ್ಕೆ ಸಜ್ಜು!

ತನ್ನ ಇಬ್ಬರು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳಿಂದಲೇ ಹತ್ಯೆಗೀಡಾದ ತಾಯಿ!

ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು

ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು?

ಇತ್ತೀಚಿನ ಸುದ್ದಿ

Exit mobile version