11:37 PM Wednesday 10 - September 2025

ಟ್ರಾಕ್ಟರ್ ಕದಿಯಲು ಬಂದ ಕಳ್ಳನ ಮೈಮೇಲೆ ಚಲಿಸಿದ ಟ್ರಾಕ್ಟರ್: ಆದ್ರೂ ಟ್ರಾಕ್ಟರ್ ಕದ್ದ ಕಳ್ಳ!

gujarath
11/09/2023

ಟ್ರಾಕ್ಟರ್ ಕದಿಯಲು ಬಂದ ಕಳ್ಳನ ಮೈಮೇಲೆ ಆಕಸ್ಮಿಕವಾಗಿ ಟ್ರಾಕ್ಟರ್ ಚಲಿಸಿದ ಘಟನೆ ಗುಜರಾತ್ ನ ಮೋಡಾಸಾದಲ್ಲಿ ನಡೆದಿದೆ.

ಕಳ್ಳತನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳ ಟ್ರಾಕ್ಟರ್ ಕದಿಯಲು ಯತ್ನಿಸುತ್ತಿರುವಾಗಲೇ ಟ್ರಾಕ್ಟರ್ ಚಕ್ರದಡಿ ಸಿಲುಕಿರೋದು ವಿಡಿಯೋದಲ್ಲಿ ಕಂಡು ಬಂದಿದೆ.

ವರದಿಗಳ ಪ್ರಕಾರ ಶೋರೂಂನ ಕಾಂಪೌಂಡ್ ಒಳಗೆ ನುಗ್ಗಿದ ಕಳ್ಳ ನಿಂತಿದ್ದ ಟ್ರ್ಯಾಕ್ಟರ್ ಅನ್ನು ಸ್ಟಾರ್ಟ್ ಮಾಡಲು ಯತ್ನಿಸಿದ್ದಾನೆ. ಸ್ವಲ್ಪ ಸಮಯ ಪ್ರಯತ್ನಿಸಿದ ಬಳಿಕ ಟ್ರಾಕ್ಟರ್ ಸ್ಟಾರ್ಟ್ ಆಗಿದೆ. ಆದರೆ ಟ್ರ್ಯಾಕ್ಟರ್ ಪಕ್ಕದಲ್ಲಿ ನಿಂತಿದ್ದ ಕಳ್ಳ ಟ್ರ್ಯಾಕ್ಟರ್ ನ ಟೈರ್ ನಡಿ ಸಿಲುಕಿಕೊಂಡಿದ್ದಾನೆ. ಈ ಸಂದರ್ಭ ಟ್ರ್ಯಾಕ್ಟರ್ ಚಾಲಕನಿಲ್ಲದೇ ಅಟೋಮ್ಯಾಟಿಕ್ ಆಗಿ ಚಲಿಸಿದೆ.

ಟ್ರ್ಯಾಕ್ಟರ್ ನ ಚಕ್ರ ತನ್ನ ಮೇಲೆ ಹರಿದ ಬಳಿಕ ಎದ್ದು ನಿಂತ ಕಳ್ಳ ತನ್ನ ಕಳ್ಳತನ ಕೃತ್ಯ ಮುಂದುವರಿಸಿದ್ದು, ನಿಧಾನವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಹತ್ತಿ, ಟ್ರ್ಯಾಕ್ಟರ್ ಜೊತೆ ಎಸ್ಕೇಪ್ ಆಗಿದ್ದಾನೆ.

ಶೋರೂಂ ನ ಮಾಲೀಕ ಕಳ್ಳತನ ಬಳಿಕ ಪೊಲೀಸ್ ದೂರು ನೀಡಿದ್ದಾರೆ. ಘಟನೆ ನಡೆದ ಐದು ದಿನಗಳ ನಂತರ ಟ್ರ್ಯಾಕ್ಟರ್ ಪತ್ತೆಯಾಗಿದೆ. ಮೋಡಾಸಾದ ಶೋರೂಮ್ ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕಳ್ಳ ಮಾತ್ರ ಇನ್ನು ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

Exit mobile version