10:02 AM Thursday 16 - October 2025

ಉದ್ಯೋಗಕ್ಕಾಗಿ ತನ್ನ ತಂದೆಯನ್ನೇ ಹತ್ಯೆ ಮಾಡಿದ ಮಗ

22/11/2020

ಜಾರ್ಖಂಡ್: ನಿರುದ್ಯೋಗಿ ಮಗನೊಬ್ಬ ಉದ್ಯೋಗ ಪಡೆಯುವ ಉದ್ದೇಶದಿಂದ ತನ್ನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಇಲ್ಲಿನ ರಾಮಗಡದಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಬಾರ್ಕಕಾನದ ಸೆಂಟ್ರಲ್‌ ಕೋಲ್‌ ಫೀಲ್ಡ್‌ ಲಿಮಿಟೆಡ್‌ನಲ್ಲಿ (ಸಿಸಿಎಲ್‌) ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಮ್‌ (55) ಎಂಬವರು ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಇವರ ಹಿರಿಯ ಮಗನೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗಂಟಲು ಕತ್ತರಿಸಿದ ಸ್ಥಿತಿಯಲ್ಲಿ  ಕೃಷ್ಣರಾಮ್ ಅವರ ಮೃತದೇಹ ಪತ್ತೆಯಾಗಿತ್ತು. ಅನುಕಂಪದ ಆಧಾರದಲ್ಲಿ ದೊರೆಯುವ ಉದ್ಯೋಗಕ್ಕಾಗಿ ಕೃಷ್ಣ ರಾಮ್ ಅವರ ಹಿರಿಯ ಮಗ ಈ ಕೃತ್ಯ ನಡೆಸಿದ್ದು, ಉದ್ಯೋಗವಿಲ್ಲದ ದುಸ್ಥಿತಿಯ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ತನ್ನ ತಂದೆಯನ್ನೇ ಆತ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಹತ್ಯೆಗೆ ಬಳಸಲಾದ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್‌ ಫೋನ್‌ ಅನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version