ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಅಪಹರಣಕ್ಕೆ ಯತ್ನ: ವ್ಯಾಪಾರಿ ಅರೆಸ್ಟ್

02/09/2023

ಕೇರಳದ ಮಾವೆಲಿಕ್ಕರ ಬಳಿಯ ಮನೆಯಿಂದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ 29 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮಂಜಿತ್ ಸಿಂಗ್ ಎಂಬ ಸೇಲ್ಸ್ ಮ್ಯಾನ್ ಈ ಪ್ರದೇಶದಲ್ಲಿ ಮನೆ ಸ್ವಚ್ಛಗೊಳಿಸುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಬಾಲಕಿ ತನ್ನ ಹಿರಿಯ ಸಹೋದರನೊಂದಿಗೆ ಅವರ ಮನೆಯ ಮುಂದೆ ಆಟವಾಡುತ್ತಿದ್ದಳು.

ಆಕೆಯ ಸಹೋದರ ಕೆಲವು ಹೂವುಗಳನ್ನು ಸಂಗ್ರಹಿಸಲು ನೆರೆಹೊರೆಯ ಮನೆಗೆ ಹೋಗಿದ್ದ. ಮತ್ತೆ ಅವನು ವಾಪಾಸ್ ಆದಾಗ ಆರೋಪಿ ಅವಳನ್ನು ಅಪಹರಣಕ್ಕೆ ಪ್ರಯತ್ನಿಸುತ್ತಿದ್ದ. ಇದೇ ವೇಳೆ ಮಕ್ಕಳು ಜೋರಾಗಿ ಕೂಗಿ ಅಳುತ್ತಿದ್ದಂತೆ ಅವನು ಅವಳನ್ನು ಬಿಟ್ಟು ತಪ್ಪಿಸಿಕೊಂಡಿದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version