11:44 PM Friday 12 - December 2025

ಪೊಲೀಸ್ ಜೀಪ್ ನಲ್ಲಿ ಕೂತು ರೀಲ್ಸ್ ಮಾಡಿದ್ಳು: ಪೊಲೀಸ್ ಸಿಬ್ಬಂದಿ ಅಮಾನತು

29/09/2023

ಪೊಲೀಸ್‌ ಜೀಪ್‌ ನಲ್ಲಿ ಯುವತಿಯೊಬ್ಬಳು ರೀಲ್ಸ್‌ ಮಾಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪಾಯಲ್ ಪರಮ್ ಎಂಬಾಕೆ ರೀಲ್ಸ್‌ ಮಾಡಲು ಪೊಲೀಸರ ವಾಹನ ಬಳಕೆ ಮಾಡಿದ್ದಳು. ಅಲ್ಲದೇ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಳು.

ಈ ವೀಡಿಯೊದಲ್ಲಿ ಪಾಯಲ್‌ ಪೊಲೀಸ್‌ ಜೀಪ್‌ನ  ಬಾನೆಟ್‌ ಮೇಲೆ ಕುಳಿತು ಪಂಜಾಬಿ ಹಾಡಿಗೆ ಸಖತ್‌ ಡಾನ್ಸ್‌ ಮಾಡಿದ್ದಾಳೆ. ಇದೇ ವೇಳೆ ಆಕ್ಷೇಪಾರ್ಹ ರೀತಿಯಲ್ಲಿ ಕೈಸನ್ನೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯ ಪಕ್ಕದಲ್ಲಿ ಪೊಲೀಸ್‌ ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ.

ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸ್‌ ವಾಹವನ್ನು ರೀಲ್ಸ್‌ ಮಾಡಲು ಅನುಮತಿ ನೀಡಿದ್ದ ಜಲಂಧರ್‌ ಪೊಲೀಸ್‌ ಠಾಣೆಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version