ನಿಕ್ಕಿ ಬೆಲ್ಲಾ ನಂತರ ಮತ್ತೋರ್ವಳು ಪ್ರೇಯಸಿಯನ್ನು ಮದುವೆಯಾದ ಜಾನ್ ಸೀನಾ! - Mahanayaka

ನಿಕ್ಕಿ ಬೆಲ್ಲಾ ನಂತರ ಮತ್ತೋರ್ವಳು ಪ್ರೇಯಸಿಯನ್ನು ಮದುವೆಯಾದ ಜಾನ್ ಸೀನಾ!

15/10/2020

ಡಬ್ಲ್ಯುಡಬ್ಲ್ಯುಇ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಇದೀಗ ಹಾಲಿವುಡ್ ಸಿನಿಮಾಗಳನ್ನು ಯಶಸ್ವಿ ನಟನಾಗಿರುವ  ಜಾನ್ ಸೀನ ತಮ್ಮ ಪ್ರೇಯಸಿಯ ಜೊತೆಗೆ ವಿವಾಹವಾಗಿದ್ದಾರೆ.

ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಇದೊಂದು ಗೌಪ್ಯ ಮದುವೆಯಾಗಿದೆ ಎಂದು ತಿಳಿದು ಬಂದಿದೆ.

ಇರಾನ್‌ನಲ್ಲಿ ಜನಿಸಿರುವ ಶೇ ಶೆರಿಯಾತ್ಜಾದೆ ಕೆನಡಾದ ನಾಗರೀಕರಾಗಿದ್ದಾರೆ. 31ರ ಹರೆಯದ ಶೇ ಬ್ರಿಟೀಷ್ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ವ್ಯಾಂಕೋವರ್‌ನಲ್ಲಿ ಟೆಕ್ ಕಂಪನಿಯೊಂದರ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಾನ್ ಸೀನಾ ಮದುವೆಯಾಗಿರುವ ಬಗ್ಗೆ ಎಲ್ಲಿಯೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲವಾದರೂ,  ಸ್ಥಳೀಯ ಮಾಧ್ಯಮಗಳು ಅಧಿಕೃತ ಮಾಹಿತಿಗಳೊಂದಿಗೆ ವರದಿ ಮಾಡಿವೆ ಎಂದು ತಿಳಿದು ಬಂದಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ