ʼಗೋ ಬ್ಯಾಕ್ ಜಗದೀಶ್ ಶೆಟ್ಟರ್ʼ: ಬೆಳಗಾವಿಯಲ್ಲಿ ಸ್ಥಳೀಯ ನಾಯಕರಿಂದ ಅಭಿಯಾನ

ಬೆಳಗಾವಿ: ಮಾಜಿ ಸಿಎಂ ಹಾಗೂ ಇತ್ತೀಚೆಗೆ ಕಾಂಗ್ರೆಸ್ ಗೆ ಹಾರಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಹಾರಿದ್ದ ಜಗದೀಶ್ ಶೆಟ್ಟರ್ ವಿರುದ್ಧ ಇದೀಗ ಬೆಳಗಾವಿಯಲ್ಲಿ ʼಗೋ ಬ್ಯಾಕ್ʼ ಘೋಷಣೆ ಕೇಳಿ ಬಂದಿದೆ.
ಧಾರವಾಡ, ಹಾವೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಶೆಟ್ಟರ್ಗೆ ಆರಂಭದಲ್ಲೇ ನಿರಾಸೆಯಾಗಿತ್ತು. ಇದೀಗ ಬೆಳಗಾವಿಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಈ ವಿಚಾರ ತಿಳಿದು ಬೆಳಗಾವಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಗರಂ ಆಗಿದ್ದಾರೆ.
ತಮಗೆ ಅವಶ್ಯಕತೆ ಬಂದಾಗ ಬೇರೆ ಪಕ್ಷಕ್ಕೆ ಹಾರಿ ಇದೀಗ ಲೋಕಸಭಾ ಟಿಕೆಟ್ ಗಾಗಿ ಮತ್ತೆ ಬಂದಿದ್ದೀರಿ, ಶೆಟ್ಟರ್ ಗೋ ಬ್ಯಾಕ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಶೆಟ್ಟರ್ ಬದಲಿಗೆ ಸ್ಥಳೀಯ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಶೆಟ್ಟರ್ ಗೆ ಟಿಕೆಟ್ ನೀಡದಂತೆ ದೆಹಲಿಗೆ ತೆರಳಿ ಹೈಕಮಾಂಡ್ ಗಮನ ಸೆಳೆಯಲು ಕೂಡ ಸ್ಥಳೀಯರು ಮುಂದಾಗಿದ್ದಾರೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth