ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆ ದಾರಿ ದೀಪ: ಸಚಿವ ಎಸ್.ಅಂಗಾರ - Mahanayaka
11:34 AM Wednesday 15 - October 2025

ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆ ದಾರಿ ದೀಪ: ಸಚಿವ ಎಸ್.ಅಂಗಾರ

s angara
15/08/2022

ಉಡುಪಿ: ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.


Provided by

ಸ್ವಾತಂತ್ರೋತ್ಸವ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಮಹತ್ವದ ದಿನ. ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಬದುಕಿನ ಆಸೆ, ಆಕಾಂಕ್ಷೆಗಳನ್ನು ಬದಿಗೆ ಇಟ್ಟು ಸಮರ್ಪಣಾ ಭಾವದಿಂದ ಭಾರತ ಮಾತೆಯ ದಾಸ್ಯದ ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆ ಇಂದಿನ ತಲೆಮಾರಿಗೆ ದಾರಿದೀಪ ಎಂದು ಸಚಿವ ಎಸ್.ಅಂಗಾರ ಹೇಳಿದರು.

ಯುವಜನರು ಸ್ವಾತಂತ್ರ ಹೋರಾಟದ ವಿಚಾರವನ್ನು ತಿಳಿಯುವ ಮೂಲಕ ಸ್ವಾತಂತ್ರ್ಯದ ವೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ವಿಶ್ವದ ಎಲ್ಲ ನಾಗರಿಕತೆಗಳ ಮಂಚೂಣಿಯಲ್ಲಿ ಭಾರತ ಸ್ಥಾನ ಪಡೆದಿತ್ತು. ಬೇರೆಲ್ಲಿಯೂ ಇಲ್ಲದ ವೈಚಾರಿಕ ಸ್ವಾತಂತ್ರ್ಯ ಭಾರತದಲ್ಲಿತ್ತು. ಹಾಗಾಗಿಯೇ ಇಲ್ಲಿ ಜೈನ, ಬೌದ್ಧ, ಚಾರ್ವಾಕ, ದೈತ, ಅದೈತ, ವಿಶಿಷ್ಟಾದ್ವತ, ಬಸವ ಪಂಥ, ಭಕ್ತಿ ಪಂಥ ಮುಂತಾದ ಹೊಸ ಹೊಸ ಅಧ್ಯಾತ್ಮಿಕ ಮಾರ್ಗಗಳು ದೊರಕಿದವು ಎಂದರು.

ದೇಶದ ಸಂಸ್ಕೃತಿ ಹಾಳು ಮಾಡಿದ ವಿದೇಶಿ ಆಕ್ರಮಣಕಾರರು ಮತ್ತು ಬ್ರಿಟೀಷರು ಸಾಮ್ರಾಜ್ಯಶಾಹಿ ಕುಟಿಲ ನೀತಿಗಳಿಂದ ನಮ್ಮನ್ನು ಆಳಿದ್ದರು. ಬ್ರಿಟಿಷರ ಅಧೀನದಲ್ಲಿದ್ದಾಗ ನಮ್ಮ ಅಭಿವೃದ್ಧಿಯ ಯೋಜನೆಗಳನ್ನು ನಾವು ರೂಪಿಸುವಂತಿರಲಿಲ್ಲ. ಆದರೆ ಈಗ ನಾವೇ ನಮ್ಮ ಪ್ರಗತಿಯ ರೂವಾರಿಗಳಾಗಿ ದ್ದೇವೆ. ಕಳೆದ 74 ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಸಾಧಿಸುತ್ತ ಬಂದಿ ದ್ದೇವೆ. ಮುಂದೆಯೂ ಪ್ರಮುಖ ಯೋಜನೆಗಳು ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪುಗೊಳ್ಳುತ್ತವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಇಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಎ ಎಚ್.ಪ್ರಸನ್ನ, ಎಸ್ಪಿ ವಿಷ್ಣುವರ್ದನ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಗುರುರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ