ಉರುಳಿ ಬಿದ್ದ 100 ವರ್ಷ ಹಳೆಯ ಮರ: ಕಾರು ಜಸ್ಟ್ ಮಿಸ್, ಆಟೋ ಚಾಲಕನಿಗೆ ಗಾಯ - Mahanayaka

ಉರುಳಿ ಬಿದ್ದ 100 ವರ್ಷ ಹಳೆಯ ಮರ: ಕಾರು ಜಸ್ಟ್ ಮಿಸ್, ಆಟೋ ಚಾಲಕನಿಗೆ ಗಾಯ

tarikere
06/05/2025


Provided by

ಚಿಕ್ಕಮಗಳೂರು: ಭಾರೀ ಗಾಳಿಗೆ ಸುಮಾರು 100 ವರ್ಷಗಳಷ್ಟು ಹಳೆಯದಾದ ಬೃಹತ್ ಮರ ಮುರಿದು ಬಿದ್ದ ಘಟನೆ ನಡೆದಿದ್ದು, ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಸ್ವಲ್ಪದರಲ್ಲೇ ಪಾರಾಗಿದ್ದು, ಆಟೋದ ಮೇಲೆ ಮರ ಬಿದ್ದು ಚಾಲಕ ಗಾಯಗೊಂಡಿದ್ದಾರೆ.

ತರೀಕೆರೆ ತಾಲೂಕಿನ ಕಲ್ಲತ್ತಿಗರಿ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಮರ ಮುರಿದು ಬೀಳುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಮೂಲದ ಪ್ರವಾಸಿಗರ ಕಾರು ಸ್ವಲ್ಪ ಅಂತರದಲ್ಲೇ ಮರದಿಂದ ಪಾರಾಗಿದ್ದಾರೆ. ಆದರೆ ತರೀಕೆರೆ ಮೂಲದ ತರೀಕೆರೆ ತಾಲೂಕಿನ ಗೇರಮರಡಿಯ ಆಟೋ ಮೇಲೆ ಮರ ಬಿದ್ದ ಪರಿಣಾಮ ಆಟೋ ಚಾಲಕನ ಕೈ ಮುರಿದಿದೆ.

ಕಲ್ಲತ್ತಿಗರಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿದೆ. ಕಲ್ಲತ್ತಿಗರಿ ಜಲಪಾತ ಅಂದ್ರೆ ರಾಜ್ಯ—ಅಂತರಾಜ್ಯದಲ್ಲೂ ಪರಿಚಿತವಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುವ ಧಾರ್ಮಿಕ-ಪ್ರವಾಸಿ ತಾಣ ಇದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ