ಚಾರ್ಮಾಡಿ ಘಾಟ್ ಅಡ್ಡದಾರಿಗೆ ಪೊಲೀಸರು ಅಳವಡಿಸಿದ್ದ 12 ಅಡಿ ಉದ್ದದ ಗೇಟ್ ನೆಲಸಮ!
ಚಿಕ್ಕಮಗಳೂರು: ಕೊಟ್ಟಿಗೆಹಾರ–ಚಾರ್ಮಾಡಿ ಘಾಟ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ದೇವನಗುಲ್ ಗ್ರಾಮದ ಅಡ್ಡದಾರಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರ ಮಾರ್ಗದರ್ಶಕ ಕಾರ್ಯಾಚರಣೆಯಡಿ 12 ಅಡಿ ಉದ್ದದ ಬಲಿಷ್ಠ ಗೇಟ್ ಅಳವಡಿಸಲಾಗಿತ್ತು. ರಾತ್ರಿ ವೇಳೆ ಸಂಚಾರ ಸಂಪೂರ್ಣ ನಿಲ್ಲಿಸುವ ಮೂಲಕ ಭದ್ರತೆ ಬಲಪಡಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಣಕಲ್ ಠಾಣಾ ಪಿಎಸ್ ಐ ರೇಣುಕಾ ನೇತೃತ್ವದ ಪೊಲೀಸರು ರಸ್ತೆ ಎರಡೂ ಬದಿಗಳಲ್ಲಿ ಗುಂಡಿ ತೋಡಿ, ಗೇಟ್ ನ ಕೀಲಿಯನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶದಲ್ಲಿ ಇಟ್ಟು ನಿರ್ವಹಣೆ ಮಾಡುತ್ತಿದ್ದರು.
ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಗೇಟ್ನ್ನು ಅಡಿಪಾಯದಿಂದಲೇ ಕಿತ್ತ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಕಳ್ಳಸಾಗಾಣಿಕೆಗೆ ದಾರಿ ಮಾಡಿಕೊಡಲು ನಡೆದಿರಬಹುದೆಂಬ ಅನುಮಾನ ಕಾಣುತ್ತಿದೆ.
ಪೊಲೀಸರು–ಗ್ರಾಮಸ್ಥರು ಸೇರಿ ಹಾಕಿದ್ದ ಭದ್ರತಾ ವ್ಯವಸ್ಥೆಗೆ ಈ ಕೃತ್ಯ ಗಂಭೀರ ಸವಾಲಾಗಿದ್ದು, ಸ್ಥಳದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಹಾಳುಮಾಡುವ ಪ್ರಯತ್ನ ಯಾರಿಂದಾದರೂ ನಡೆದರೆ ಕಠಿಣ ಕ್ರಮ ಅನಿವಾರ್ಯ ಎಂದು ಬಣಕಲ್ ಪಿ.ಎಸ್.ಐ.ರೇಣುಕಾ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ಶಾಶ್ವತವಾಗಿ ತಡೆಯಲು ಪೊಲೀಸರು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























