ಒಂದಲ್ಲ, ಎರಡಲ್ಲ.. 3 ಗಂಟೆಗಳ ಅವಧಿಯಲ್ಲಿ 14 ಫ್ಲ್ಯಾಟ್‌ಗಳಿಗೆ ನುಗ್ಗಿದ ಕಳ್ಳರ ತಂಡ..! - Mahanayaka

ಒಂದಲ್ಲ, ಎರಡಲ್ಲ.. 3 ಗಂಟೆಗಳ ಅವಧಿಯಲ್ಲಿ 14 ಫ್ಲ್ಯಾಟ್‌ಗಳಿಗೆ ನುಗ್ಗಿದ ಕಳ್ಳರ ತಂಡ..!

19/08/2023

ಕೇವಲ ಮೂರು ಗಂಟೆಗಳ ಅವಧಿಯಲ್ಲಿ 14 ಫ್ಲ್ಯಾಟ್‌ಗಳಿಗೆ ಕಳ್ಳರ ತಂಡವು ಕನ್ನ ಹಾಕಿದ ಘಟನೆ ಪುಣೆಯ ಬಾರಾಮತಿ ಪಟ್ಟಣದಲ್ಲಿ ನಡೆದಿದೆ. ದೇಸಾಯಿ ಎಸ್ಟೇಟ್‌ನಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡಗಳು ಮತ್ತು ಪಟ್ಟಣದ ಕ್ರೀಡಾ ಸಂಕೀರ್ಣದ ಮುಂದಿನ ಪ್ರದೇಶದಲ್ಲಿ ಈ ಕಳ್ಳತನಗಳು ನಡೆದಿವೆ.

14 ಫ್ಲ್ಯಾಟ್‌ಗಳ ಪೈಕಿ ಎರಡರಲ್ಲಿ 200 ಗ್ರಾಂ ಚಿನ್ನಾಭರಣಗಳು ಮತ್ತು ಸುಮಾರು 80,000 ರೂಪಾಯಿ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಬಾರಾಮತಿ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಗಣೇಶ ಇಂಗಳೆ ತಿಳಿಸಿದ್ದಾರೆ.

ಯಾರೂ ಇಲ್ಲದ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್ ಮಾಡಿದ್ದ ನಾಲ್ವರು ಕಳ್ಳರ ತಂಡವು ಕಾರಲ್ಲಿ ಬಂದು ದಾಳಿ ಮಾಡಿದೆ. ಕಳ್ಳರ ಪತ್ತೆಗಾಗಿ ಪುಣೆ ಗ್ರಾಮಾಂತರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ