ಡೆಹ್ರಾಡೂನ್: ಕುಸಿದು ಬಿದ್ದ 15 ಮನೆಗಳು, 7 ಗೋಶಾಲೆಗಳು - Mahanayaka
10:59 PM Tuesday 28 - October 2025

ಡೆಹ್ರಾಡೂನ್: ಕುಸಿದು ಬಿದ್ದ 15 ಮನೆಗಳು, 7 ಗೋಶಾಲೆಗಳು

uthara kand
17/08/2023

ಉತ್ತರಾಖಂಡ: ಡೆಹ್ರಾಡೂನ್ ಬಳಿಯ ಜಖಾನ್ ಗ್ರಾಮದಲ್ಲಿ ಭೂಕುಸಿತವಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಡೆಹ್ರಾಡೂನ್ ನಿಂದ 50 ಕಿ.ಮೀ. ದೂರದಲ್ಲಿರುವ ಲಾಂಘಾ ರಸ್ತೆಯಲ್ಲಿರುವ ಮದ್ರಾಸು ಗ್ರಾಮ ಪಂಚಾಯಿತಿಯ ಭಾಗವಾದ ಜಖಾನ್ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಭುಕುಸಿತದಲ್ಲಿ 15 ಮನೆಗಳು ಕುಸಿದು ಏಳು ಗೋಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಘಟನೆಗಳ ಸುದ್ದಿ ತಿಳಿದ ನಂತರ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸೇರಿದಂತೆ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್ಲಾ ಸಂತ್ರಸ್ತ ಜನರನ್ನು ಪಚ್ಚಾ ಗ್ರಾಮದ ಹತ್ತಿರದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದರು.

ಜಖಾನ್ ಗ್ರಾಮದಲ್ಲಿ ಸುಮಾರು 15 ಕುಟುಂಬಗಳು ವಾಸವಾಗಿದ್ದು, 50 ಜನರನ್ನು ಒಳಗೊಂಡಿದೆ. ಆದರೆ, ಈ ಘಟನೆಗಳಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ