ಗಾಝಾದ ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮತ್ತೆ 15 ಸಾವು; ಸ್ಮಶಾನದಂತೆ ಕಾಣುತ್ತಿರುವ ಆಸ್ಪತ್ರೆಗಳ ಆವರಣ..! - Mahanayaka

ಗಾಝಾದ ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮತ್ತೆ 15 ಸಾವು; ಸ್ಮಶಾನದಂತೆ ಕಾಣುತ್ತಿರುವ ಆಸ್ಪತ್ರೆಗಳ ಆವರಣ..!

03/11/2023


Provided by

ಗಾಝಾದ ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಮತ್ತೆ ದಾಳಿ ಮಾಡಿದೆ. ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. ಎರಡು ಇಸ್ರೇಲಿ ವೈಮಾನಿಕ ದಾಳಿಗಳು ಬುರೇಜ್ ನಿರಾಶ್ರಿತರ ಶಿಬಿರದಲ್ಲಿನ ಅಪಾರ್ಟ್ ಮೆಂಟ್ ಕಟ್ಟಡಗಳ ಸಂಪೂರ್ಣ ಬ್ಲಾಕ್ ಅನ್ನು ನೆಲಸಮಗೊಳಿಸಿದವು. ಮತ್ತು ಎರಡು ಆಶ್ರಯ ತಾಣಗಳಾಗಿದ್ದ ಶಾಲೆಯನ್ನು ಕೂಡಾ ಹಾನಿಗೊಳಿಸಲಾಗಿದೆ.

ಅವಶೇಷಗಳಿಂದ ಆವೃತವಾದ ಇಲ್ಲಿನ ಗಾಯಾಳುಗಳನ್ನು ಫೆಲೆಸ್ತೀನಿಯರು ಅವರನ್ನು ಕರೆದೊಯ್ಯಲು ತುಂಬಾ ಓಡೋಡಿ ಬಂದರು.
ಕೇಂದ್ರ ಗಾಝಾದ ಅಲ್-ಅಕ್ಸಾ ಆಸ್ಪತ್ರೆಗೆ ಬಂದಂತಹ ಮಕ್ಕಳ ಮುಖಗಳ ಚಿತ್ರಣ ಮನ ಕಲಕುವಂತಿದ್ದು ಜೀವಂತ ಮತ್ತು ಸತ್ತವರ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಷ್ಟವಾಯಿತು.

ಅನೇಕ ದೇಹಗಳು ಆಸ್ಪತ್ರೆ ನೆಲದ ಮೇಲೆ ಅನಾಥವಾಗಿ ಬಿದ್ದಿದ್ದವು. ವೈದ್ಯರು ಗಾಯಾಳುಗಳ ತಲೆಯಿಂದ ರಕ್ತದ ಹರಿವನ್ನು ತಡೆಯಲು ಪ್ರಯತ್ನಿಸುತ್ತಿರುವ ಚಿತ್ರ ಅಯ್ಯೋ ಎನ್ನಿಸುವಂತಿತ್ತು. ಮಕ್ಕಳನ್ನು ಉಳಿಸಲು ಹೆತ್ತವರು ರೋಧಿಸುತ್ತಿದ್ರೆ, ಇತ್ತ ಹೆತ್ತವರನ್ನು ಉಳಿಸಲು ಮಕ್ಕಳು ಪರದಾಡುವ ಚಿತ್ರಣ ಮನಕಲಕುವಂತಿತ್ತು.

ಕೇವಲ ಒಂದು ತಿಂಗಳೊಳಗಿನ ಯುದ್ಧದಲ್ಲಿ 3,700 ಕ್ಕೂ ಹೆಚ್ಚು ಫೆಲೆಸ್ತೀನ್ ಮಕ್ಕಳು ಮತ್ತು ಅಪ್ರಾಪ್ತ ವಯಸ್ಕರು ಕೊಲ್ಲಲ್ಪಟ್ಟಿದ್ದಾರೆ. ನಿರಂತರ ಬಾಂಬ್ ದಾಳಿಗಳು ಈ ಪ್ರದೇಶದ 2.3 ಮಿಲಿಯನ್ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರನ್ನು ಪಲಾಯನ ಮಾಡಿಸಿವೆ. ಗಾಝಾದಲ್ಲಿ ಆಹಾರ, ನೀರು ಮತ್ತು ಇಂಧನದ ಕೊರತೆ ಎದ್ದು ಕಾಣುತ್ತಿದೆ.

ಇತ್ತೀಚಿನ ಸುದ್ದಿ