ಮಾಜಿ ಶಾಸಕನ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ 15 ದರೋಡೆಕೋರರು: 1 ಕೆ.ಜಿ. ಚಿನ್ನಾಭರಣ, ಹಣ ದರೋಡೆ - Mahanayaka
11:02 PM Tuesday 21 - October 2025

ಮಾಜಿ ಶಾಸಕನ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ 15 ದರೋಡೆಕೋರರು: 1 ಕೆ.ಜಿ. ಚಿನ್ನಾಭರಣ, ಹಣ ದರೋಡೆ

tharikere
08/05/2023

ಚಿಕ್ಕಮಗಳೂರು: ತರೀಕೆರೆ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮನೆ ದರೋಡೆಯು ಚಿಕ್ಕಮಗಳೂರು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದು, ಚುನಾವಣೆಯ ದ್ವೇಷವೋ? ಹಣಕ್ಕಾಗಿ  ದರೋಡೆ ಕೃತ್ಯವೋ ಎಂಬ ಶಂಕೆ ಮೂಡಿದೆ.

ಬಂದೂಕು, ಮಚ್ಚು ಹಿಡಿದು ಬಂದ ಸುಮಾರು 15 ಮಂದಿ ದುಷ್ಕರ್ಮಿಗಳು ಮಾಜಿ ಶಾಸಕರ ಮನೆಯ ಬಾಗಿಲು ಮುರಿದು ಮಾಜಿ‌ ಶಾಸಕ ಎಸ್.ಎಂ.ನಾಗರಾಜು ಮೇಲೆ ಹಲ್ಲೆ ನಡೆಸಿ, 1 ಕೆ.ಜಿ.ಗೂ ಅಧಿಕ ಚಿನ್ನಾಭರಣ, ಹಣ ದರೋಡೆ ಮಾಡಿದ್ದಾರೆ.

ಅಜ್ಜಂಪುರ ತಾಲೂಕಿನ ಗಡಿಹಳ್ಳಿಯ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಚುನಾವಣೆ ಸಮಯದಲ್ಲಿ ಈ ದರೋಡೆ ಪ್ರಕರಣ ಹಲವು ಅನುಮಾನ ಮೂಡಿಸಿದೆ. ಸ್ಥಳಕ್ಕೆ ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿದ್ದು, ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ