15 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಮ್ ಹೆಣ್ಣು ಮಕ್ಕಳು ಯಾರನ್ನು ಬೇಕಾದರೂ ವಿವಾಹವಾಗಬಹುದು | ಹೈಕೋರ್ಟ್ - Mahanayaka

15 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಮ್ ಹೆಣ್ಣು ಮಕ್ಕಳು ಯಾರನ್ನು ಬೇಕಾದರೂ ವಿವಾಹವಾಗಬಹುದು | ಹೈಕೋರ್ಟ್

11/02/2021


Provided by

ಚಂಡಿಗಢ: ಪ್ರೌಢಾವಸ್ಥೆ ತಲುಪಿದ ಮುಸ್ಲಿಮ್ ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೂ ತಾವು ಇಚ್ಛಿಸಿದವರನ್ನು ಮದುವೆಯಾಗಲು ಸ್ವತಂತ್ರರು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2021ರಂದು 17 ವರ್ಷದ ಬಾಲಕಿ 36 ವರ್ಷದ ವ್ಯಕ್ತಿಯನ್ನು ಮುಸ್ಲಿಂ ವಿಧಿಯ ಪ್ರಕಾರ ಮದುವೆಯಾಗಿದ್ದರು. ಇದಕ್ಕೆ ಬಾಲಕಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ಜೀವ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮುಸ್ಲಿಂ ವೈಯಕ್ತಿಕ ಕಾನೂನು 195ನೇ ವಿಧಿ ಉಲ್ಲೇಖನದ ಅನ್ವಯ ಮತ್ತು ನ್ಯಾಯಾಲಯಗಳ ವಿವಿಧ ತೀರ್ಪುಗಳ ಆಧಾರದ ಮೇಲೆ ನ್ಯಾಯಮೂರ್ತಿ ಅಲ್ಕಾ ಸರಿನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಪ್ರೌಢವಸ್ಥೆಯೆಂಬುದು 15 ವರ್ಷಕ್ಕೆ ಮೇಲ್ಪಟ್ಟದ್ದಾಗಿದ್ದರಿಂದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನ ಬೇಕಾದರೂ ಮದುವೆಯಾಗಬಹುದು ಎಂದು ಆದೇಶಿಸಿದ್ದಾರೆ.

ಇತ್ತೀಚಿನ ಸುದ್ದಿ