ಪೈಶಾಚಿಕ: 15 ವರ್ಷದ ಬಾಲಕಿಯ ಮೇಲೆ ಸರ್ಕಾರಿ ಶಿಕ್ಷಕನಿಂದಲೇ ಅತ್ಯಾಚಾರ - Mahanayaka
12:38 PM Saturday 31 - January 2026

ಪೈಶಾಚಿಕ: 15 ವರ್ಷದ ಬಾಲಕಿಯ ಮೇಲೆ ಸರ್ಕಾರಿ ಶಿಕ್ಷಕನಿಂದಲೇ ಅತ್ಯಾಚಾರ

23/12/2024

ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಶಾಲಾ ಶಿಕ್ಷಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಈ ಘಟನೆ ದಂಟಾರಾಮ್‌ಗಢದಿಂದ ವರದಿಯಾಗಿದ್ದು, ಆರೋಪಿ ಸರ್ಕಾರಿ ಶಾಲಾ ಶಿಕ್ಷಕ, ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಶನಿವಾರ ತಡರಾತ್ರಿ ಬಾಲಕಿಯನ್ನು ಆಕೆಯ ನಿವಾಸದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸಂತ್ರಸ್ತೆಯ ಕುಟುಂಬ ಸದಸ್ಯರು ಭಾನುವಾರ ದೂರು ದಾಖಲಿಸಿದ್ದಾರೆ. ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ದಂತರಾಮ್‌ಗಢ ಪೊಲೀಸ್ ಠಾಣೆಯ ಎಸ್ಎಚ್ಒ ಭವಾನಿ ಸಿಂಗ್ ಹೇಳಿದ್ದಾರೆ. ಬಾಲಕಿಯನ್ನು ಸೋಮವಾರ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ