16 ವರ್ಷದವರಿಗೆ ಲೈಂಗಿಕತೆ ಬಗ್ಗೆ ಸ್ವಯಂ ನಿರ್ಧಾರದ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್; ಕೋರ್ಟ್ ಈ ರೀತಿ ಹೇಳಿದ್ಯಾಕೆ..? - Mahanayaka
5:16 AM Wednesday 17 - December 2025

16 ವರ್ಷದವರಿಗೆ ಲೈಂಗಿಕತೆ ಬಗ್ಗೆ ಸ್ವಯಂ ನಿರ್ಧಾರದ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್; ಕೋರ್ಟ್ ಈ ರೀತಿ ಹೇಳಿದ್ಯಾಕೆ..?

25/06/2023

16 ವರ್ಷ ವಯಸ್ಸಿನವರು ಲೈಂಗಿಕ ವಿಚಾರದ ಬಗ್ಗೆ ತಮ್ಮದೇ ಆದ ಸಮ್ಮತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೇಘಾಲಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪೋಸ್ಕೋ ಅಡಿಯಲ್ಲಿ ದಾಖಲಾಗಿದ್ದ ಎಫ್‍ ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಯೆಂಗ್ಡೋ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ಮತ್ತು ಆಪಾದಿತ ಸಂತ್ರಸ್ತೆ ಪ್ರೀತಿಸುತ್ತಿದ್ದರಿಂದ ಇದು ಲೈಂಗಿಕ ದೌರ್ಜನ್ಯದ ಕೃತ್ಯವಲ್ಲ. ಸಂಪೂರ್ಣವಾಗಿ ಸಮ್ಮತಿಯಿಂದ ನಡೆದ ಕ್ರಿಯೆ ಎಂದು ಮನವಿಯಲ್ಲಿ ಹೇಳಲಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ಕೋರ್ಟ್ ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಶೀಲಿಸುತ್ತದೆ. ಅಂತಹ ವ್ಯಕ್ತಿಯು ತನ್ನ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾರೆಯೇ ಎಂಬುದನ್ನು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಕೋರ್ಟ್ ನಲ್ಲಿ ಅಪ್ರಾಪ್ತೆ ತನ್ನ ಹೇಳಿಕೆ ಮತ್ತು ಸಾಕ್ಷ್ಯದಲ್ಲಿ ತಾನು ಅರ್ಜಿದಾರರ ಗೆಳತಿ ಎಂದು ಬಹಿರಂಗಪಡಿಸಿದ್ದಾಳೆ. ಅಲ್ಲದೇ ಯಾವುದೇ ಬಲವಂತ ಇಲ್ಲದೆ ಇಬ್ಬರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ದೃಢಪಡಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಯಿತು. ಬಳಿಕ ಪೋಕ್ಸೋ ಸಂಬಂಧಿಸಿದ ಎಫ್‍ಐಆರ್‌ನ್ನು ಕೋರ್ಟ್ ರದ್ದುಗೊಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ