ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ ಬಾಯ್ ಫ್ರೆಂಡ್: ಕಣ್ಣೆದುರು ಕೊಲೆ ನಡೆದರೂ ಯಾರೂ ತಡೆಯಲಿಲ್ಲ
ನವದೆಹಲಿ: 16 ವರ್ಷದ ಬಾಲಕಿಯೋರ್ವಳನ್ನು ಆಕೆಯ ಬಾಯ್ ಫ್ರೆಂಡ್ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಬಾಲಕಿಗೆ ಆಕೆಯ ಬಾಯ್ ಫ್ರೆಂಡ್ ಸಾಹಿಲ್ ಹಲವು ಬಾರಿ ಇರಿಯುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಸಾಕಷ್ಟು ಜನರಿದ್ದರೂ ಯಾರೊಬ್ಬರು ಕೂಡ ಬಾಲಕಿಯನ್ನು ರಕ್ಷಿಸದೇ ತಮ್ಮಷ್ಟಕ್ಕೆ ನೋಡುತ್ತಾ ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ.
ಬಾಲಕಿ ಹಾಗೂ ಆರೋಪಿ ಸಾಹಿಲ್ ಪ್ರೀತಿಯಲ್ಲಿದ್ದು, ಹಿಂದಿನ ದಿನ ಸಂಜೆ ಜಗಳವಾಡಿದ್ದರು. ಭಾನುವಾರ ಬಾಲಕಿ ತನ್ನ ಸ್ನೇಹಿತನ ಮಗುವಿನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಚಾಕುವಿನಿಂದ ಮನಬಂತೆ ಚುಚ್ಚಿದ್ದು, ಒಂದು ಹಂತದಲ್ಲಿ ಚಾಕು ಆಕೆಯ ದೇಹದಲ್ಲಿ ಚುಚ್ಚಿಕೊಂಡು ಸಿಕ್ಕಿಕೊಂಡಂತೆ ಕಂಡು ಬಂದಿದೆ. ಆದರೂ ಬಿಡದೇ ಚಾಕುವನ್ನು ದೇಹದಿಂದ ಹೊರಗೆಳೆದು ಮತ್ತೆ ದಾಳಿ ನಡೆಸಿದ್ದಾನೆ.
ಹಲ್ಲೆಯ ಬಳಿಕ ಆತ ಸ್ಥಳದಿಂದ ಹೋಗದೇ ಮತ್ತೆ ಚಪ್ಪಡಿ ಕಲ್ಲು ಎತ್ತಿ ಬಾಲಕಿಗೆ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ನಡೆದರೂ ಸಾರ್ವಜನಿಕರು ದೂರದಿಂದಲೇ ನೋಡುತ್ತಾ, ನಮಗ್ಯಾಕೆ ಇದೆಲ್ಲ ಎಂಬಂತೆ ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಯಾರಾದರೂ ಒಬ್ಬರು ಬಾಲಕಿಯ ರಕ್ಷಣೆಗೆ ಮುಂದಾಗಿದ್ದರೆ, ಬಾಲಕಿಯ ಪ್ರಾಣ ಉಳಿಯುತ್ತಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ದೆಹಲಿ ಮಹಿಳಾ ಆಯೋಗದ ಸಮಿತಿ ಸದಸ್ಯೆ ಸ್ವಾತಿ ಮಲಿವಾಲಿ ಖಂಡಿಸಿದ್ದು, ದೆಹಲಿ ಮಹಿಳೆಯರಿಗೆ ಮಾತ್ರವಲ್ಲ ಬಾಲಕಿಯರಿಗೂ ಸುರಕ್ಷಿತವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://t.co/NzW13isXmU. Full story …. Case of LoveJihad by the looks of it!!! 😤😤😤 https://t.co/JMTCcAmcig
— 💕DesiDiva💕 (@desi_diva1) May 29, 2023
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























