ಅಗ್ನಿ ದುರಂತಕ್ಕೆ 18 ತಿಂಗಳ ಹೆಣ್ಣು ಮಗು ಬಲಿ!

03/09/2025
ಬೆಂಗಳೂರು: ಮನೆಗೆ ಬೆಂಕಿ ಬಿದ್ದು 18 ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ನೇಪಾಳ ಮೂಲದ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿಯ 18 ತಿಂಗಳ ಪುತ್ರಿ ಅನು ಮೃತಪಟ್ಟ ಮಗುವಾಗಿದೆ.
ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿ 8 ವರ್ಷಗಳಿಂದ ಇಲ್ಲಿ ನೆಲೆಸಿದ್ದರು. ಅಪಾರ್ಟ್ ಮೆಂಟ್ ನಲ್ಲಿ 10X10 ಅಳತೆ ರೂಮ್ನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಮಗುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು, ಮಗು ಸಾವನ್ನಪ್ಪಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD