2 ಅಂಗಡಿ, 4 ಮನೆಗಳಲ್ಲಿ ಸರಣಿ ಕಳ್ಳತನ | ಮನೆಯವರು ಮಲಗಿದ್ದ ವೇಳೆ ಒಳಗೆ ನುಗ್ಗಿದ ಕಳ್ಳರು! - Mahanayaka

2 ಅಂಗಡಿ, 4 ಮನೆಗಳಲ್ಲಿ ಸರಣಿ ಕಳ್ಳತನ | ಮನೆಯವರು ಮಲಗಿದ್ದ ವೇಳೆ ಒಳಗೆ ನುಗ್ಗಿದ ಕಳ್ಳರು!

16/02/2021


Provided by

ವಿಜಯಪುರ: 2 ಅಂಗಡಿ ಹಾಗೂ 4 ಮನೆಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ವಿಜಯಪುರದ ಚಡಚಣ ತಾಲೂಕಿನ ರೇವಂತಗಾಂವ ಗ್ರಾಮದಲ್ಲಿ ನಡೆದಿದ್ದು, ಬೈಕ್, ನಗದು, ಚಿನ್ನಾಭರಣ ಮತ್ತು ಬಟ್ಟೆಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಮನೆಗೆ ಬೀಗ ಹಾಕಿ ಮೇಲ್ಛಾವಣಿಯಲ್ಲಿ  ಮಲಗಿದ್ದ ವೇಳೆ ಬೀಗ ಮುರಿದು ಒಳಗೆ ಬಂದಿದ್ದ ಕಳ್ಳರು ಸದ್ದಿಲ್ಲದೇ ಕದ್ದು ಪರಾರಿಯಾಗಿದ್ದಾರೆ. 2 ಅಂಗಡಿಗಳ ಬೀಗ ಮುರಿದು ಕಳವು ಮಾಡಲಾಗಿದೆ.

ಸುಭಾಷ ಧಾಭೆ, ಸೂರಪ್ಪ ಧಾಬೆ, ಅನ್ನಪೂರ್ಣ ಖಾತೆ, ಸಿದ್ಧಪ್ಪ ಜಾಬಗೊಂಡೆ, ಸಿದ್ದರಾಯ ಬಿರಾದಾರ ಎಂಬವರಿಗೆ ಸೇರಿದ ಅಂಗಡಿ ಹಾಗೂ ಮನೆಗಳಲ್ಲಿ ಕಳ್ಳತನ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇನ್ನು ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ್ದ ಚಿನ್ನಾಭರಣಗಳನ್ನು ಕೂಡ ಕಳ್ಳರು ಹೊತ್ತೊಯ್ದಿದ್ದು, ಇದರಿಂದಾಗಿ ದಿಕ್ಕು ತೋಚದ ಮಹಿಳೆ ಘಟನಾ ಸ್ಥಳದಲ್ಲಿ ತೀವ್ರವಾಗಿ ರೋದಿಸಿದ್ದಾರೆ.

ಇತ್ತೀಚಿನ ಸುದ್ದಿ