ಪಬ್ಲಿಸಿಟಿಗಾಗಿ ‘ಸಾವು’ ಎಂಬ ಮಹಾ ಸುಳ್ಳು: ನಟಿ ಪೂನಂ ಪಾಂಡೆ ವಿರುದ್ಧ 2 ದೂರು ದಾಖಲು

04/02/2024
ಕೇವಲ ಪ್ರಚಾರಕ್ಕಾಗಿ ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ‘ತಾನು ಸತ್ತಿದ್ದೇನೆ’ ಎಂಬ ಸುಳ್ಳು ಹೇಳಿ ಯಮಾರಿಸಿದ್ದಕ್ಕಾಗಿ ಎರಡು ಪೊಲೀಸ್ ದೂರುಗಳು ದಾಖಲಾಗಿದೆ.
ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ವರದಿಗಳ ನಂತರ ಪೂನಂ ಪಾಂಡೆ ನಿನ್ನೆ ‘ನಾನು ಇಲ್ಲಿದ್ದೇನೆ, ಜೀವಂತವಾಗಿದ್ದೇನೆ’ ಎಂದು ಹೇಳಿದ್ದರು. ತಾನು ಚೆನ್ನಾಗಿದ್ದೇನೆ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಮಾಡಲಾಗಿದೆ ಎಂದು ಅವರು ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋ ಹಾಕಿ ಹೇಳಿದ್ದರು.
ರೂಪದರ್ಶಿ-ನಟಿಯ ‘ನಕಲಿ ಪಿಆರ್ ಸ್ಟಂಟ್’ ಕಾರಣದಿಂದಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಿನೆಮಾ ಕಾರ್ಮಿಕರ ಸಂಘವು ಒತ್ತಾಯಿಸಿದೆ.
ಬಾಲಿವುಡ್ ಉದ್ಯಮದ ಹಲವಾರು ಜನರು ಪೂನಂ ಅವರ ಪ್ರಚಾರ ಸ್ಟಂಟ್ ಅನ್ನು ಖಂಡಿಸಿದ್ದಾರೆ.