ಚಿರತೆ ಹಿಡಿಯಲು ಬೋನು ಅಳವಡಿಸಿದರೂ ಎರಡು ಕುರಿಗಳನ್ನು ತಿಂದು ಹಾಕಿದ ಚಿರತೆ - Mahanayaka
10:29 AM Saturday 31 - January 2026

ಚಿರತೆ ಹಿಡಿಯಲು ಬೋನು ಅಳವಡಿಸಿದರೂ ಎರಡು ಕುರಿಗಳನ್ನು ತಿಂದು ಹಾಕಿದ ಚಿರತೆ

24/01/2021

ಕೊಳ್ಳೇಗಾಲ: ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಬೋನುಗಳನ್ನು ಅಳವಡಿಸಿದ್ದರೂ ಕೂಡ, ಚಿರತೆ ಬೋನಿನಲ್ಲಿದ್ದ ಎರಡು ಕುರಿಗಳನ್ನು ತಿಂದು ಹಾಕಿದೆ.

ತಾಲೂಕಿನ ಯಡಕುರಿಯ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಗ್ರಾಮಸ್ಥರು ಚಿರತೆ ಭಯದಿಂದ ಕಂಗೆಟ್ಟಿದ್ದು,  ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಜನರ ಮನವಿಯ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಎರಡು ಬೋನುಗಳನ್ನು ಯಡ ಕುರಿಯ ಸೇತುವೆ ಬಳಿ ಮತ್ತು ಸತ್ತೇ ಗಾಲ ನಾಲೆಯ ಬಳಿ ಬೋನ್‌ ಅಳವಡಿಸಿದ್ದರು. ಚಿರತೆಯನ್ನು ಸೆಳೆಯುವ ಉದ್ದೇಶದಿಂದ ಇರಿಸಲಾಗಿದ್ದ ಕುರಿಗಳನ್ನು  ತಿಂದು ಚಿರತೆ ಕಾಡಿಗೆ ತೆರಳಿದೆ ಎಂದು ಹೇಳಲಾಗಿದೆ.

happy birthday

ಇತ್ತೀಚಿನ ಸುದ್ದಿ