ಜ್ಯೂಸ್ ಎಂದು ಭಾವಿಸಿ ಬಾಟಲಿಯಲ್ಲಿದ್ದ ಕೀಟನಾಶಕ ಕುಡಿದು 2 ವರ್ಷದ ಮಗು ಸಾವು - Mahanayaka
10:11 PM Tuesday 28 - October 2025

ಜ್ಯೂಸ್ ಎಂದು ಭಾವಿಸಿ ಬಾಟಲಿಯಲ್ಲಿದ್ದ ಕೀಟನಾಶಕ ಕುಡಿದು 2 ವರ್ಷದ ಮಗು ಸಾವು

yaschik
04/09/2023

ರಾಮನಗರ: ಜ್ಯೂಸ್ ಎಂದು ಭಾವಿಸಿ ಕೀಟನಾಶವನ್ನು ಕುಡಿದ 2 ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬವರ ಪತ್ರ ಯಶ್ವಿಕ್(2) ಮೃತಪಟ್ಟ ಮಗುವಾಗಿದೆ. ಬೆಳೆಗೆ ಕೀಟನಾಶಕ ಸಿಂಪಡಿಸಲು ಹನುಮಂತ ಅವರು ದ್ರಾವಕ ತಂದಿದ್ದರು. ಇದರಲ್ಲಿ ಉಳಿದಿದ್ದ ಕೀಟನಾಶಕವನ್ನು ಬಾಟಲಿಯೊಂದರಲ್ಲಿ ತುಂಬಿಸಿಟ್ಟಿದ್ದರು.

ಬಾಟಲಿಯಲ್ಲಿದ್ದ ಕೀಟನಾಶವನ್ನು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕ ಕುಡಿದಿದ್ದು, ಬಳಿಕ ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದೆ. ತಕ್ಷಣವೇ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಇತ್ತೀಚಿನ ಸುದ್ದಿ